ಉದಾಸಿ ಕುಟುಂಬಕ್ಕೆ ಶಾಕ್ ಕೊಟ್ಟ ಬಿಜೆಪಿ

278

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಸಿ.ಎಂ ಉದಾಸಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ ಬಹುತೇಕ ಮೃತರ ಕುಟುಂಬಸ್ಥರಿಗೆ ಟಿಕೆಟ್ ನೀಡಿಕೊಂಡು ಬರಲಾಗುತ್ತಿದೆ. ಬೆಳಗಾವಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಅಂಗಡಿ ಪತ್ನಿಗೆ ಟಿಕೆಟ್ ನೀಡಲಾಯಿತು.

ಅದೇ ರೀತಿ ಸಿ.ಎಂ ಉದಾಸಿ ಕುಟುಂಬದಲ್ಲಿಯೇ ಟಿಕೆಟ್ ನೀಡಲಾಗುತ್ತೆ ಅನ್ನೋ ಚರ್ಚೆಯ ನಡುವೆ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಿದೆ. ಈ ಮೂಲಕ ಉದಾಸಿ ಕುಟುಂಬಕ್ಕೆ ಶಾಕ್ ನೀಡಿದೆ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಬೇಕು ಅನ್ನೋ ಕಾರಣಕ್ಕೆ ಶಿವರಾಜ್ ಸಜ್ಜನರ್ ಗೆ ಟಿಕೆಟ್ ನೀಡಲಾಗಿದೆ ಅನ್ನೋದು ಬಿಜೆಪಿ ಮಾತು. ಆದರೆ, ಬೆಳಗಾವಿಯಲ್ಲಿ ಲೋಕಸಭಾ ಉಪ ಚುನಾವಣೆ ಕಥೆ ಏನಾಯ್ತು ಅನ್ನೋದು ಜನರ ಮುಂದೆ ಇದೆ.

ಈ ಚುನಾವಣೆಯಲ್ಲಿ ಸಿಎಂ ಆದಿಯಾಗಿ ಸಚಿವರ ದಂಡೇ ಇಲ್ಲಿರುತ್ತೆ. ಹೀಗಾಗಿ ಗೆಲ್ಲಲು ರಣತಂತ್ರಗಳನ್ನು ರೂಪಿಸಬಹುದು. ಒಂದು ವೇಳೆ ಸೋಲಾದರೂ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕೆಲಸವಾಗುತ್ತೆ. ಹೊಸಬರನ್ನು ಬೆಳಸಲು ಇದೊಂದು ಅವಕಾಶವೆಂದು ಬಿಜೆಪಿ ಹೈಕಮಾಂಡ್ ಶಿವರಾಜ್ ಸಜ್ಜನರ್ ನ್ನು ಆಯ್ಕೆ ಮಾಡಿದೆಯಂತೆ. ಆಯ್ಕೆಯನ್ನು ಮತದಾರ ಎಷ್ಟು ಒಪ್ಪಿಕೊಳ್ಳುತ್ತಾನೆ ಅನ್ನೋದು ನವೆಂಬರ್ 2ರಂದು ಬರುವ ಫಲಿತಾಂಶದ ಮೇಲೆ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!