ಹಿಮೋಫಿಲಿಯಾದಿಂದ ಮಕ್ಕಳ, ತಾಯಂದಿರ ನೋವು ಶಮನ

332

ಪ್ರಜಾಸ್ತ್ರ ಸುದ್ದಿ

ಧಾರವಾಡ: ಹಿಮೋಫಿಲಿಯಾ ಮಕ್ಕಳ ಹಾಗೂ ತಾಯಂದಿರ ನೋವುನ್ನು ಶಮನಗೊಳಿಸಲು ಸೊಸೈಟಿ ಸದಾ ಸಿದ್ಧವಾಗಿದೆ ಎಂದು ವಕೀಲೆ ಶೀಲಾ ಅಂಚಟಗೇರಿ ಹೇಳಿದ್ದಾರೆ. ಹುಬ್ಬಳ್ಳಿ-ಧಾರವಾಡ ಹಿಮೋಫಿಲಿಯಾ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಟಿಕಾರೆ ವಹಿಸಿಕೊಂಡಿದ್ದರು. ವಿಶೇಷ ಮಹಾಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಹಿಮೋಫಿಲಿಯಾ ಸೊಸೈಟಿ ಅಭ್ಯುದಯಕ್ಕೆ ಸದಸ್ಯರುಗಳು ಹಲವಾರು ಯೋಜನೆಗಳ ಬಗ್ಗೆ ಚರ್ಚಿಸಿದರು. ಇದೇ ವೇಳೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಶಾರದಾ ಸತ್ತಿಗೇರಿ, ಉಪಾಧ್ಯಕ್ಷರಾಗಿ ರಮೇಶ ಶಿವಕ್ಕನವರ್, ಕಾರ್ಯದರ್ಶಿಯಾಗಿ ಜಯಶ್ರೀ ಉಜೈನಿಮಠ, ಜಂಟಿ ಕಾರ್ಯದರ್ಶಿಯಾಗಿ ಲಿನಾ ಮಹೇಂದ್ರಕರ್, ಖಜಾಂಚಿಯಾಗಿ ರಾಘವೇಂದ್ರ ಹೆಗಡೆ, ಸದಸ್ಯರಾಗಿ ಶಂಕರ ಟಿಕಾರೆ, ಭೀಮಪ್ಪ ಕುಳಿಗೊಡ, ನಿಂಗಪ್ಪ ಕರಡಿಗುಡ್ಡ, ಶೃತಿ ಗಾವಡೆ, ಸಿದ್ದನಗೌಡ ನೂಲ್ವಿ, ಮುತ್ತುರಾಜ ತೂಟ್ಕರ್ ಮತ್ತು ಗೌರವಾಧ್ಯಕ್ಷರನ್ನಾಗಿ ಸುರೇಶ ಟಿಕಾರೆ ಅವರನ್ನು ಆಯ್ಕೆ ಮಾಡಿ ಸೊಸೈಟಿಗೆ ಮಾರ್ಗದರ್ಶನ ನೀಡುವಂತೆ ಕೋರಲಾಯಿತು.  ಶಾರದಾ ಸತ್ತಿಗೆರಿ ಸ್ವಾಗತಿಸಿದರು.  ಜಯಶ್ರೀ ಉಜೈನಿಮಠ ನಿರೂಪಿಸಿ, ವಂದಿಸಿದರು.




Leave a Reply

Your email address will not be published. Required fields are marked *

error: Content is protected !!