ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ರಜೆ ನೀಡಲಾಗಿದ್ದ ಕಾಲೇಜುಗಳು ಇಂದು ಪ್ರಾರಂಭವಾಗಿವೆ. ಸೋಮವಾರದಿಂದ ಹೈಸ್ಕೂಲ್ ಗಳು ಪ್ರಾರಂಭವಾಗಿದ್ದು, ಇಂದಿನಿಂದ ಪಿಯು ಹಾಗೂ ಪದವಿ ಕಾಲೇಜುಗಳು ಶುರುವಾಗಿವೆ. ಹೀಗಾಗಿ ಕಾಲೇಜುಗಳ ಮುಂದೆ ಪೊಲೀಸ್ ಬಂದೋಬಸ್ತಿ ನೀಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಯಾವ ಕಾಲೇಜುಗಳು ಸೂಕ್ಷ್ಮ ಇವೆ. ಎಲ್ಲಿ ಗಲಾಟೆಗಳು ಆಗಬಹುದು, ಮತ್ತೆ ವಿವಾದಕ್ಕೆ ದಾರಿ ಮಾಡಿಕೊಡುತ್ತವೆ ಅನ್ನೋದನ್ನು ನೋಡಿಕೊಂಡು ಹಾಗೂ ಈ ಹಿಂದೆ ಹಿಜಾಬ್-ಕೇಸರಿ ಶಾಲು ಗಲಾಟೆ ಎಲ್ಲಿ ನಡೆದಿವೆ ಅಂತಹ ಕಾಲೇಜುಗಳ ಎದುರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಶಾಲೆಯ ಸಿಬ್ಬಂದಿಯೊಬ್ಬರಿದ್ದು, ವಿದ್ಯಾರ್ಥಿಗಳನ್ನು ಗುರುತಿಸಿ ಒಳಗೆ ಬಿಡುತ್ತಿದ್ದಾರೆ.