ಹಿಜಾಬ್, ಕೇಸರಿ ಶಾಲು ವಿವಾದ ಮತ್ತು ಚುನಾವಣೆ

217

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇದೀಗ ಬರೀ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ. ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ ರಾಜಕಾರಣಿಗಳ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಇದರ ಜೊತೆಗೆ ಕೇಳಿ ಬರುತ್ತಿರುವುದು ಇದೊಂದು ರಾಜಕೀಯ ದುರುದ್ದೇಶ. ಪಂಜರಾಜ್ಯ ಚುನಾವಣೆ ಹಾಗೂ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ.

ಚುನಾವಣೆಗಳು ಹತ್ತಿರ ಇರುವಾಗ ಹಾಗೂ ನಡೆಯುವ ಸಂದರ್ಭದಲ್ಲಿ ಕೋಮುಸೌಹಾರ್ದತೆ ಕದಡುವ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಈ ಮೂಲಕ ವಾಸ್ತವ ಪರಿಸ್ಥಿತಿಯಿಂದ ಜನರನ್ನು ವಿಮುಖರನ್ನಾಗಿ ಮಾಡುವುದು. ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗದಂತೆ ನೋಡಿಕೊಳ್ಳುವುದು. ಚುನಾವಣೆ ಪ್ರಚಾರಕ್ಕೆ ಇಂತಹ ಘಟನೆಗಳನ್ನು ಬಳಸಿಕೊಂಡು ಒಬ್ಬರ ಮೇಲೆ ಒಬ್ಬರು ವಾಗ್ದಾಳಿ ನಡೆಸುವಂತದ್ದು. ಹೀಗಾಗಿ ಯುವ ಜನತೆ ರಾಜಕೀಯ ಚದುರಂಗದಾಟದ ಕಾಯಿಗಳಾಗಬೇಡಿ ಎಂದು ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!