ಹೊಸಕೋಟೆ ನಗರಸಭೆ ಎಲೆಕ್ಷನ್: ಕೇಸರಿ ಕೇಕೆ…

317

ಹೊಸಕೋಟೆ: ಇಲ್ಲಿನ ನಗರಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಕಮಾಲ್ ಮಾಡಿದೆ. ಹೀಗಾಗಿ 31 ವಾರ್ಡ್ ಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ನಗರಸಭೆಯನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.

31 ವಾರ್ಡ್ ಗಳ ನಗರಸಭೆಯಲ್ಲಿ ಬಿಜೆಪಿ 22ರಲ್ಲಿ ಗೆಲ್ಲುವ ಮೂಲಕ ಬಹುಮತ ಪಡೆದು ಆಡಳಿತದ ಚುಕ್ಕಾಣಿ ಹಿಡಿಯಲು ರೆಡಿಯಾಗಿದೆ. ಫೆಬ್ರವರಿ 9ರಂದು ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದೆ. ಕಾಂಗ್ರೆಸ್ ಒಂದು ಸ್ಥಾನವನ್ನ ಸಹ ಗೆದ್ದಿಲ್ಲ. ಈ ಮೂಲಕ ಮುಖಭಂಗ ಅನುಭವಿಸಿದೆ.

ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿ ವಿಜಯ ಸಾಧಿಸಿದ್ದ ಶಾಸಕ ಶರಥ ಬಚ್ಚೇಗೌಡ ಹಾಗೂ ಬಿಜೆಪಿಯ ಎಂಟಿಬಿ ನಾಗರಾಜ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಇದೀಗ ಎಂಟಿಬಿ ನಾಗರಾಜ ಗೆಲುವಿನ ನಗೆ ಬೀರಿದ್ದಾರೆ.




Leave a Reply

Your email address will not be published. Required fields are marked *

error: Content is protected !!