ಹಸಿವು ಸೂಚ್ಯಾಂಕದಲ್ಲಿ ನೇಪಾಳ, ಬಾಂಗ್ಲಾ, ಪಾಕ್ ಗಿಂತ ಭಾರತ ಕೆಳಗೆ..

242

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ, ನೆರೆಯ ನೇಪಾಳ, ಬಾಂಗ್ಲಾ, ಪಾಕ್ ದೇಶಗಳಿಗಿಂತ ಕೆಳಗಿದೆ. ಈ ಮೂಲಕ ಈ ಎಲ್ಲ ರಾಷ್ಟ್ರಗಳಿಗಿಂತ ಭಾರತದಲ್ಲಿ ಹಸಿವಿನಿಂದ ಬಳಲುವರ ಸಂಖ್ಯೆ ಹೆಚ್ಚಾಗಿದೆ. ಐರಿಸ್ ಮೂಲದ ಕನ್ಸರ್ನ್ ವರ್ಲ್ಡ್ ವೈಡ್ ಹಾಗೂ ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫೆ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

116 ರಾಷ್ಟ್ರಗಳಲ್ಲಿ ಭಾರತ 101ನೇ ಸ್ಥಾನದಲ್ಲಿದೆ. ನೇಪಾಳ (76), ಬಾಂಗ್ಲಾದೇಶ (76), ಮಾನ್ಮಾರ್ (71) ಹಾಗೂ ಪಾಕಿಸ್ತಾನ (92)ನೇ ಸ್ಥಾನದಲ್ಲಿವೆ. ಕಳೆದ ವರ್ಷ ನಡೆಸಿದ 107 ರಾಷ್ಟ್ರಗಳ ಪೈಕಿ 94ನೇ ಸ್ಥಾನದಲ್ಲಿತ್ತು. ಚೀನಾ, ಬ್ರೆಜಿಲ್ ಹಾಗೂ ಕುವೈತ್ ಸೇರಿದಂತೆ 18 ರಾಷ್ಟ್ರಗಳು 5ಕ್ಕಿಂತ ಕಡಿಮೆ ಅಂಕಗಳೊಂದಿಗೆ ಟಾಪ್ ನಲ್ಲಿವೆ. ಈ ಮಾಹಿತಿಯನ್ನು ಗ್ಲೋಬಲ್ ಹಂಗರ್ ಇಂಡೆಕ್ಸ್ ಹೇಳಿದೆ.




Leave a Reply

Your email address will not be published. Required fields are marked *

error: Content is protected !!