ತಮ್ಮ ನೋವು ಆಡಿಕೊಂಡವರಿಗೆ ಸಮಂತಾ ತಿರುಗೇಟು

177

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ದುನಿಯಾದ ಸ್ಟಾರ್ ನಟಿ ಸಮಂತಾ ರತು ಪ್ರಭು ಮಯೋಸೈಟಿಸ್ ಅನ್ನೋ ಸಮಸ್ಯೆಗೆ ಒಳಗಾಗಿ ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ನಟಿಯ ನೋವಿನ ಬಗ್ಗೆ ಸಂವೇದನಾರಹಿತವಾಗಿ ಟ್ವೀಟ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.

ಸಮಂತಾ ಅವರ ಬಗ್ಗೆ ದುಃಖವಾಗುತ್ತದೆ. ಅವರು ಈಗ ತಮ್ಮ ಎಂದಿನ ಕಾಂತಿ, ಹೊಳಪು ಹೊಂದಿಲ್ಲ. ಡಿವೋರ್ಸ್ ಬಳಿಕ ಬಲಿಷ್ಠವಾಗಿ ಹಿಂದಿರುಗುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಮಯೋಸೈಟಿಸ್ ಅವರಿಗೆ ಆಘಾತ ನೀಡಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು.

ಇದಕ್ಕೆ ತಿರುಗೇಟು ನೀಡಿರುವ ನಟಿ ಸಮಂತಾ, ನಿಮಗೆ ತಿಂಗಳಾನುಗಟ್ಟಲೆ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬರದಿರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಕಾಂತಿ ಹೆಚ್ಚಿಸಲು ನನ್ನಿಂದ ಒಂದಿಷ್ಟು ಪ್ರೀತಿ ಪಡೆಯಿರಿ ಎಂದು ಹೇಳುವ ಮೂಲಕ ಅವರ ಅನಾರೋಗ್ಯ ಹಾಗೂ ವೈಯಕ್ತಿಕ ಬದುಕನ್ನು ಆಡಿಕೊಂಡವರಿಗೆ ತಿರುಗೇಟು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!