ಹುಕ್ಕೇರಿ ಬಳಿ ಅಪಘಾತ: ಮೂವರ ಸಾವು

307

ಬೆಳಗಾವಿ: ಬೊಲೆರೋ ವಾಹನವೊಂದು ಪಾದಚಾರಿಗಳ ಮೇಲೆ ಹರಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹುಕ್ಕೇರಿ ತಾಲೂಕಿನ ಗುಡಸ ಹತ್ತಿರ ನಡೆದಿದೆ. ಇನ್ನೂ ಮೂವರು ಗಾಯಗೊಂಡಿದ್ದು ಅವರನ್ನ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

38 ವರ್ಷದ ಪ್ರೇಮಾ ರಾಜು ಬಂಗಾರಿ, 40 ವರ್ಷದ ಜಯಶ್ರೀ ಎಲ್ಲಪ್ಪ ಮಾಲದಂಡಿ ಹಾಗೂ 45 ವರ್ಷದ ಸುಮಿತ್ರಾ ಭವಾನಿ ಎಂಬುವರು ಮೃತಪಟ್ಟಿದ್ದಾರೆ. ಅತೀ ವೇಗವಾಗಿ ವಾಹನ ಚಲಾಯಿಸಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ.


TAG


Leave a Reply

Your email address will not be published. Required fields are marked *

error: Content is protected !!