ಬೈಕ್ ಅಪಘಾತ: ನಾಲ್ವರ ಸಾವು

588

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಬೈಕ್ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಕಳೆದ ತಡರಾತ್ರಿ ಈ ಘಟನೆ ನಡೆದಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಇದೀಗ ಮತ್ತೊಬ್ಬ ಮೃತಪಟ್ಟಿದ್ದಾನೆ.

ಒಂದೇ ಬೈಕ್ ನಲ್ಲಿ ನಾಲ್ವರು ಹೊರಟಿದ್ದರು ಈ ವೇಳೆ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಬೈಕ್ ಬಿದ್ದಿದೆ. ಪ್ರವೀಣ ಸಣದಿ, ಮಹಿಬೂಬ ಸೇಗಡಿ, ಬಸವರಾಜ್ ಮಾಳಿ, ಫರಾಣ್ ಜಮಾದಾರ ಸೇರಿ 4 ಜನ ಮೃತಪಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!