149 ದಿನಗಳಲ್ಲಿ 5 ಲಕ್ಷ ದಾಟಿದ ಸೋಂಕು

322

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 18 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಂದೇ ದಿನದಲ್ಲಿ 18,552 ಸೋಂಕು ಪತ್ತೆಯಾಗಿರುವುದು ಇದೆ ಮೊದಲು.

ಇನ್ನು 384 ಜನರ ಸಾವನ್ನಪ್ಪಿದ್ದು ಇದರ ಸಂಖ್ಯೆ 15,685ಕ್ಕೆ ಏರಿಕೆಯಾಗಿದೆ. ಜನವರಿಯಲ್ಲಿ ಮೊದಲ ಬಾರಿಗೆ ದೇಶದಲ್ಲಿ ಸೋಂಕು ಪತ್ತೆಯಾಗಿತ್ತು. ಅಲ್ಲಿಂದ ಇಲ್ಲಿ ತನಕ ಬರೋಬ್ಬರಿ 5, 08, 953 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳಲು 149 ದಿನಗಳು ತೆಗೆದುಕೊಂಡಿವೆ. ಈಗ್ಲಾದ್ರೂ ಜನರು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

ಇನ್ನು ಈ ಬಗ್ಗೆ ಕೇಂದ್ರ ಸರ್ಕಾರ ಯಾವ ಕ್ರಮಗಳನ್ನ ತೆಗೆದುಕೊಳ್ಳುತ್ತೆ ಗೊತ್ತಾಗ್ತಿಲ್ಲ. ಆರಂಭದ ದಿನಗಳಲ್ಲಿ ಕರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಿ, ಅಭಿನಂದನೆ ಸಲ್ಲಿಸಿ ಎಂದಿದ್ರು. ಆದ್ರೆ, ಈಗ ಅವರು ಲಕ್ಷಾಂತರ ಸೋಂಕಿತರ ಜೊತೆ ಕೆಲಸ ಮಾಡುವಂತಾಗಿದ್ದು, ಸೋಂಕು ನಿಯಂತ್ರಣಕ್ಕೆ ಸರ್ಕಾರ ಏನು ಮಾಡುತ್ತೆ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!