2ನೇ ಮದುವೆ ಬಗ್ಗೆ ಮಾತನಾಡಿದ ನಟ ಆಶಿಶ್ ವಿದ್ಯಾರ್ಥಿ

157

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಇದೆ ಮೇ 25ರಂದು ಕೊಲ್ಕತ್ತಾ ಕ್ಲಬ್ ನಲ್ಲಿ ಫ್ಯಾಷನ್ ಉದ್ಯಮಿ ರೂಪಾಲಿ ಎಂಬುವವರನ್ನು ಮದುವೆಯಾಗಿದ್ದಾರೆ. ಈ ಮೂಲಕ ನಟ ಆಶಿಶ್ 2ನೇ ಮದುವೆಯಾಗಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಯಿತು.

ತಮ್ಮ 2ನೇ ಮದುವೆ ಬಗ್ಗೆ ತಮ್ಮದೆ ಯುಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ನಟ ಆಶಿಶ್ ವಿದ್ಯಾರ್ಥಿ, ನಮ್ಮೆಲ್ಲರ ಬದುಕು ವಿಭಿನ್ನ. ಪ್ರತಿಯೊಬ್ಬರಿಗೂ ವಿಭಿನ್ನ ಅವಕಾಶಗಳಿವೆ. ಪಿಲೊ ಹಾಗೂ ನಾನು ಸುಂದರ ಬದುಕು ಕಟ್ಟಿದ್ದೇವು. ಹಲವು ವರ್ಷಗಳ ಬಳಿಕ ನಮ್ಮ ಆಲೋಚನೆ ಕ್ರಮ, ಭವಿಷ್ಯ ನೋಡುವ ರೀತಿ ವಿಭಿನ್ನ ಎನಿಸಿತು. ಅದನ್ನು ಸರಿಪಡಿಸಿಕೊಳ್ಳಲು ತುಂಬಾ ಪ್ರಯತ್ನಿಸಿದೇವು. ಆದರೆ, ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ನನಗೆ 55 ವರ್ಷ ಇದ್ದಾಗ ರೂಪಾಲಿಯನ್ನು ಭೇಟಿಯಾದೆ. ಒಂದು ವರ್ಷದ ಹಿಂದೆ ಗಂಡ, ಹೆಂಡ್ತಿಯಾಗಿ ಜೀವನ ನಡೆಸೋಣ ಎನಿಸಿತು. ಈಗ ಮದುವೆಯಾಗಿದ್ದೇವೆ. ನನ್ನ ವಯಸ್ಸು 60 ಅಲ್ಲ, 57. ಹಾಗೇ ರೂಪಾಯಿ ವಯಸ್ಸು 50 ಎಂದು ಹೇಳುವ ಮೂಲಕ ನಟ ಆಶಿಶ್ ವಯಸ್ಸಿನ ಬಗ್ಗೆಯೂ ನಡೆದ ಚರ್ಚೆಗೆ ಸ್ಪಷ್ಟನೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!