ನಟಿ ತಮನ್ನಾ, ನಟ ಸಂಜಯ್ ದತ್ತಗೆ ಸಮನ್ಸ್

93

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಹುಭಾಷಾ ನಟಿ ತಮನ್ನಾ ಭಾಟಿಯಾ ಹಾಗೂ ನಟ ಸಂಜಯ್ ದತ್ ಅವರಿಗೆ ಮುಂಬೈ ಸೈಬರ್ ಪೊಲೀಸರು ಸಮನ್ಸ್ ನೀಡಿದ್ದಾರೆ. 2023ರ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಅಕ್ರಮವಾಗಿ ಲೈವ್ ಸ್ಟ್ರೀಮಿಂಗ್ ಮಾಡಿದ್ದಾರೆ. ಈ ಮೂಲಕ ವಯಕಾಮ್ ಸಂಸ್ಥೆಗೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ್ದಾರೆ ಎನ್ನುವ ಆರೋಪದಡಿ ನೋಟಿಸ್ ನೀಡಲಾಗಿದೆ.

ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ. ನಟ ಸಂಜಯ್ ದತ್ ಗೂ ನೋಟಿಸ್ ನೀಡಿದ್ದು, ಅವರು ವಿದೇಶದಲ್ಲಿರುವ ಕಾರಣ ಕಾಲಾವಕಾಶ ಕೇಳಿದ್ದಾರೆ.

ಇವರು ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ಸಂಸ್ಥೆಯ ಫೈರ್ ಪ್ಲೇ ಅಪ್ಲಿಕೇಶನ್ ನಲ್ಲಿ ಪ್ರಚಾರ ಮಾಡಿರುವ ಆರೋಪ ಹೊತ್ತಿದ್ದಾರೆ. 2023ರಲ್ಲಿ ಅಕ್ರಮವಾಗಿ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಿರುವ ಆರೋಪ ಸಂಬಂಧ ದೂರು ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!