ಸಲಿಂಗ ವಿವಾಹ ಕಾಯ್ದೆ ಸಂಸತ್ತಿನ ನಿರ್ಧಾರ: ಸುಪ್ರೀಂ

226

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸಲಿಂಗ ವಾಹನ ಕಾನೂನು ಮಾನ್ಯತೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗೆ 21 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇದನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ನಾವು ಕಾನೂನುಗಳನ್ನು ಮಾಡುವುದಿಲ್ಲ. ವಿಶೇಷ ವಿವಾಹ ಕಾಯ್ದೆಯ ವಿಷಯವನ್ನು ಸಂಸತ್ ನಿರ್ಧರಿಸಬೇಕು ಎಂದಿದೆ.

ಸಿಜಿಐ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಹಿಮಾ ಕೊಹ್ಲಿ, ಎಸ್.ರವೀಂದ್ರ ಭಟ್, ಪಿ.ಎಸ್ ನರಸಿಂಹ ಅವರಿದ್ದ ಸಂವಿಧಾನಿಕಪೀಠ 10 ದಿನಗಳ ಕಾಲ ವಿಚಾರಣೆ ನಡೆಸಿ, ಮೇ 11ರಂದು ತೀರ್ಪು ಕಾಯ್ದಿರಿಸಿತ್ತು. ಅದನ್ನು ಇಂದು ಪ್ರಕಟಿಸಿದೆ.

ಸಂವಿಧಾನದ 21ನೇ ವಿಧಿ ಅಡಿ ಒಬ್ಬರ ಜೀವನ ಹಾಗೂ ಸ್ವಾತಂತ್ರ್ಯದ ಹಕ್ಕಿನ ಕುರಿತಾಗಿದೆ. ಇದರಲ್ಲಿ ತಮ್ಮ ಜೀವನ ಸಂಗಾತಿಯನ್ನು ಗುರುಸುವುದೂ ಆಗಿದೆ. ಇದನ್ನು ಗುರುತಿಸದಿರುವುದು ತಾರತಮ್ಯವೆಂದು ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!