ಶಾಲಾ ಕಟ್ಟಡದಿಂದ ಬಿದ್ದು ಬಾಲಕಿ ಸಾವು: ಅತ್ಯಾಚಾರ, ಕೊಲೆ ಆರೋಪ

248

ಪ್ರಜಾಸ್ತ್ರ ಸುದ್ದಿ

ಅಯೋಧ್ಯೆ: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬಳು ಶಾಲೆಯ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾಳೆ. ವಿದ್ಯಾರ್ಥಿ ಪೋಷಕರು ಇದು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಎಂದು ಆರೋಪಿಸಿದ್ದಾರೆ.

ಈಗ ಶಾಲೆಗೆ ರಜೆ ಇದೆ. ಹೀಗಿದ್ದರೂ ಮುಂಜಾನೆ 8.30ಕ್ಕೆ ಪ್ರಾಚಾರ್ಯರು ಶಾಲೆಗೆ ವಿದ್ಯಾರ್ಥಿನಿಯನ್ನು ಕರೆಸಿಕೊಂಡಿದ್ದು ಯಾಕೆ ಎಂದು ಪೋಸಕರು ಪ್ರಶ್ನಿಸಿದ್ದಾರೆ. ಅಲ್ಲದೆ 9.50ರ ಸುಮಾರಿಗೆ ಪ್ರಾಚಾರ್ಯರು ಫೋನ್ ಮಾಡಿ ಉಯ್ಯಾಲೆಯಿಂದ ಬಾಲಕಿ ಬಿದ್ದು ಗಾಯ ಮಾಡಿಕೊಂಡಿದ್ದಾಳೆ ಎಂದರು. ಶಾಲೆಗೆ ಹೋದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಂತಾ ಹೇಳಲಾಗಿದೆಯಂತೆ.

ಕಟ್ಟಡದಿಂದ ಬಿದ್ದು ಗಾಯಗಳಾಗಿವೆ ಎಂದು ಮರಣೋತ್ತರ ಪರೀಕ್ಷೆ ಹೇಳಿದೆ. ಬಾಲಕಿ ಕಟ್ಟಡದಿಂದ ಬಿದ್ದಿರುವುದು ಸಿಸಿಟಿವಿ ದೃಶ್ಯಗಳು ಸಹ ಸ್ಪಷ್ಟಪಡಿಸಿವೆ. ಹೀಗಾಗಿ ಶಾಲೆಯ ಪ್ರಾಚಾರ್ಯರ ಹೇಳಿಕೆಯ ವಿರುದ್ಧವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!