ಸಂಜೆ ಸಿಡಿಎಸ್ ರಾವತ್ ಅಂತ್ಯಕ್ರಿಯೆ.. ರಕ್ಷಣಾ, ಗೃಹ ಸಚಿವರು ಸುದ್ದಿಗೋಷ್ಠಿ ನಡೆಸಿದರಾ?

208

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಭಾರತೀಯ ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಜನಲರ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ 11 ಸೇನಾಧಿಕಾರಿಗಳು ಬುಧವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದರು. ರಾವತ್ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಪ್ರಧಾನಿ ಮೋದಿ ಸೇರಿದಂತೆ ಸಂಪುಟ ಸಚಿವರು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸೇನಾ ಪಡೆಯ ಮುಖ್ಯಸ್ಥರು, ರೈತ ಸಂಘಟನೆಯ ನಾಯಕರು ಸೇರಿದಂತೆ ಸಾಕಷ್ಟು ಸಂಖ್ಯೆಯ ಗಣ್ಯರು ದರ್ಶನ ಪಡೆಯುತ್ತಿದ್ದಾರೆ. ಸಂಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂತಿಮ ಗೌರವ ಸಲ್ಲಿಸಿದ ನಂತರ ಅಂತ್ಯಕ್ರಿಯೆ ನಡೆಯಲಿದೆ.

ಮೂಡಿದ ಹಲವು ಪ್ರಶ್ನೆಗಳಿಗೆ ಉತ್ತರ ಎಂದು?

ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಎಂಐ-17ವಿ-5 ಅನ್ನೋ ಹೆಲಿಕಾಪ್ಟರ್ ರಷ್ಯಾ ನಿರ್ಮಿಸಿದೆ. ಕಝನ್ ಅನ್ನೋ ಕಂಪನಿ ಇದನ್ನು ತಯಾರಿಸುತ್ತೆ. ಇದರ ವಿಶೇಷತ, ಸಾಮರ್ಥ್ಯ, ಕಾರ್ಯಕ್ಷಮತೆ ತಿಳಿದರೆ ಸಾಕು ಈ ಹೆಲಿಕಾಪ್ಟರ್ ಎಷ್ಟೊಂದು ಶಕ್ತಿಶಾಲಿ ಅನ್ನೋದು ತಿಳಿಯುತ್ತೆ. ಹೀಗಾಗಿ 2012ರಲ್ಲಿ ಭಾರತೀಯ ವಾಯು ಪಡೆಗೆ ಇದನ್ನು ಸೇರ್ಪಡೆ ಮಾಡಲಾಯಿತು. ದೇಶದೊಳಗೆ ಪ್ರಧಾನಿ ಸಂಚರಿಸಲು ಸಹ ಈ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತದೆ. ಇಂತಹ ಎಂಐ-17ವಿ-5 ಕಾಪ್ಟರ್ ದುರಂತಕ್ಕೆ ಇಡಾಗಿರುವುದು ಸಾಕಷ್ಟು ಅನುಮಾನ ಮೂಡಿಸಿದೆ.

ಸೇನಾಪಡೆ ಅತ್ಯುನ್ನತ ಸ್ಥಾನದಲ್ಲಿರುವ ಮೊದಲ ಸಿಡಿಎಸ್ ಅಧಿಕಾರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಿಪಿನ್ ರಾವತ್ ಸೇರಿ ಇತರೆ 11 ಉನ್ನತ ಮಟ್ಟದ ಸೇನಾಧಿಕಾರಿಗಳು ಈ ರೀತಿ ದುರ್ಮರಣಕ್ಕೆ ತುತ್ತಾಗಿರುವುದು ನಿಜಕ್ಕೂ ದುರಂತ. ಈ ಘಟನೆ ಜಗತ್ತಿನ ಮೂಲೆ ಮೂಲೆಯಲ್ಲಿ ಹಬ್ಬಿದೆ. ದುರಂತದ ಬಗ್ಗೆ ಹತ್ತು ಹಲವು ಅನುಮಾನಗಳು ಮೂಡಿವೆ. ಹವಾಮಾನ ವೈಪರೀತ್ಯದ ಒಂದೇ ಕಾರಣಕ್ಕೆ ಹಾಲಿಕಾಪ್ಟರ್ ಪತನಗೊಂಡಿತಾ ಗೊತ್ತಿಲ್ಲ. ಇದರ ತನಿಖೆಗೆ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಇದರ ನೇತೃತ್ವವನ್ನು ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರಿಗೆ ವಹಿಸಲಾಗಿದೆ.

ಸಚಿವರು ಮಾಧ್ಯಮಗೋಷ್ಠಿ ನಡೆಸಿದರಾ?

ಇಂತಹ ಗಂಭೀರ ಪ್ರಕರಣದ ಕುರಿತು ರಕ್ಷಣಾ ಸಚಿವರಾಗಿ, ಕೇಂದ್ರ ಗೃಹ ಸಚಿವರಾಗಿ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ದುರಂತದ ಬಗ್ಗೆ ಮಾಹಿತಿ ನೀಡಿದರು. ಟ್ವೀಟರ್ ಮೂಲಕ ತಿಳಿಸಿದರು. ಆದರೆ, ಮಾಧ್ಯಮದ ಎದುರು ಬಂದು ಒಂದೇ ಒಂದು ಮಾತು ಆಡಿಲ್ಲ. ಎಲ್ಲರಲ್ಲೂ ಕಾಡುತ್ತಿರುವ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸುವ ಪ್ರಶ್ನೆ ಮಾಡಿಲ್ಲ. ಇಲ್ಲಿ ಪ್ರಾಣ ಕಳೆದುಕೊಂಡವರ್ಯಾರು ಸಾಮಾನ್ಯ ವ್ಯಕ್ತಿಗಳಲ್ಲ. ಮೃತರಿಗೆ ಸಂತಾಪ ಸೂಚಿಸಿ ಸುಮ್ಮನೆ ಉಳಿದು ಬಿಡುವುದಕ್ಕೆ. ಪ್ರಧಾನಿ ಮೋದಿ ಆದಿಯಾಗಿ ಪ್ರಮುಖ ಹುದ್ದೆಗಳಲ್ಲಿರುವ ಕೇಂದ್ರ ಸಚಿವರು ಮಾಧ್ಯಮಗೋಷ್ಠಿಯಿಂದ ದೂರು ಉಳಿದು ಬರೀ ಟ್ವೀಟರ್ ಗೆ ಸೀಮಿತವಾಗಿರುವುದಕ್ಕೆ ದೇಶವಾಸಿಗಳಲ್ಲಿ ಸಾಕಷ್ಟು ಅನುಮಾನ ಮೂಡಿರುವುದಂತೂ ಸತ್ಯ.




Leave a Reply

Your email address will not be published. Required fields are marked *

error: Content is protected !!