ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ: ರಾಹುಲ್ ಗಾಂಧಿ

73

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದ ಬಡವರ, ಹಿಂದುಳಿದವರ ಬದುಕು ಹಸನು ಮಾಡಬಹುದಾಗಿದ್ದ ಹಣವನ್ನು ಪ್ರಧಾನಿ ಮೋದಿ ಸ್ನೇಹಿತರ ಸಾಲ ಮನ್ನಾ ಮಾಡಿದ್ದಾರೆ. ತಮ್ಮ ಉದ್ಯಮಿ ಮಿತ್ರರ ಬರೋಬ್ಬರಿ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದ ಗಾಯಕ್ಕೆ ಔಷಧಿಯಾಗಬೇಕಿದ್ದ ಹಣವನ್ನು ಅದಾನಿಗಳ ಸಂಪಾದನೆಗೆ ಖರ್ಚು ಮಾಡಿದ್ದಾರೆ. ಈ ಅಪರಾಧವನ್ನು ದೇಶದ ಜನತೆ ಎಂದಿಗೂ ಕ್ಷಮಿಸಬಾರದು ಎಂದಿದ್ದಾರೆ.

16 ಲಕ್ಷ ಕೋಟಿ ರೂಪಾಯಿಯಲ್ಲಿ 16 ಕೋಟಿ ಯುವಕರಿಗೆ ವಾರ್ಷಿಕ 1 ಲಕ್ಷ ಸಂಬಳದ ಉದ್ಯೋಗ ಸಿಗುತ್ತಿತ್ತು. 16 ಕೋಟಿ ಮಹಿಳೆರಿಗೆ 1 ಲಕ್ಷ ರೂಪಾಯಿ ನೀಡಬಹುದಿತ್ತು. 10 ರೈತ ಕುಟುಂಬಗಳ ಸಾಲ ಮನ್ನಾ ಮಾಡಬಹುದಿತ್ತು. 20 ವರ್ಷಗಳ ದೇಶದಲ್ಲಿ 400 ರೂಪಾಯಿ ಸಿಲಿಂಡರ್ ಗ್ಯಾಸ್ ಕೊಡಬಹುದಿತ್ತು. ಬುಡಕಟ್ಟು, ಹಿಂದುಳಿದವರಿಗೆ ಪದವಿ ತನಕ ಉಚಿತ ಶಿಕ್ಷಣ ನೀಡಬಹುದಿತ್ತು. 3 ವರ್ಷಗಳ ಕಾಲ ಭಾರತೀಯ ಸೇನೆಯ ಸಂಪೂರ್ಣ ವೆಚ್ಚ ನೀಡಬಹುದಿತ್ತು. ಹೀಗೆ 16 ಲಕ್ಷ ಕೋಟಿ ರೂಪಾಯಿಯಲ್ಲಿ ಏನೆಲ್ಲ ಮಾಡಬಹುದಿತ್ತು ಎನ್ನುವುದನ್ನು ಹೇಳುವ ಮೂಲಕ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!