ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾರ್ ಮೇಲೆ ಟಿಪ್ಪರ್ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿಯ ಅತ್ತಿಬೆಲೆ ಟೋಲ್ ಹತ್ತಿರ ನಡೆದಿದೆ. ಕಾರು ಚಾಲಕ ಹಾಗೂ ಮತ್ತೋರ್ವ ಮೃತಪಟ್ಟಿದ್ದಾನೆ.
ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಕಾರು ಮೇಲೆ ಬಿದ್ದಿದೆ. ಇದ್ರಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಅತ್ತಿಬೆಲೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.