ಒಬ್ಬನೇ ವ್ಯಕ್ತಿಯಿಂದ 533 ಮಂದಿಗೆ ಕರೋನಾ ಸೋಂಕು

429

ಅಕ್ರಾ: ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ನಂಬುವುದಕ್ಕೆ ಕಷ್ಟವಾದ್ರೂ ಸತ್ಯ. ಇದನ್ನ ಸ್ವತಃ ಆ ದೇಶದ ಅಧ್ಯಕ್ಷರೆ ಹೇಳಿದ್ದಾರೆ. ಒಬ್ಬನೇ ಒಬ್ಬ ವ್ಯಕ್ತಿಯಿಂದ ಬರೋಬ್ಬರಿ 533 ಮಂದಿಗೆ ಕರೋನಾ ಸೋಂಕು ತಗುಲಿದೆ. ಇದು ಇನ್ನು ಹೆಚ್ಚಾಗುವ ಸಾಧ್ಯತೆ ಸಹ ಇದೆಯಂತೆ.

ಆಫ್ರಿಕಾದ ಘಾನದ ಟೆಮಾ ಬಂದರು ಪಟ್ಟಣದಲ್ಲಿ ಮೀನಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನೊಬ್ಬನಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಅಲ್ಲಿನ 921 ಜನರಿಗೆ ಕರೋನಾ ಟೆಸ್ಟ್ ಮಾಡಿಸಲಾಯ್ತು. ಅದರಲ್ಲಿ 533 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದು ಒಬ್ಬನೇ ವ್ಯಕ್ತಿಯಿಂದ ಸೋಂಕು ತಗುಲಿದೆ ಅನ್ನೋದು ಆತಂಕದ ಸಂಗತಿ ಎಂದು ಆಫ್ರಿಕಾದ ರಿಪಬ್ಲಿಕ್ ಆಫ್ ಘಾನಾ ಅಧ್ಯಕ್ಷ ಅಕುಪೋ ಅಡ್ಡೋ ಹೇಳಿದ್ದಾರೆ.

ಘಾನಾ ಅಧ್ಯಕ್ಷ ಅಕುಪೋ ಅಡ್ಡೋ

ಘಾನಾದಲ್ಲಿ ಇದುವರೆಗೂ 4,700 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಇಲ್ಲಿ 22 ಜನರು ಸಾವನ್ನಪ್ಪಿದ್ದಾರೆ. ಮಾರ್ಚ್ ನಲ್ಲಿ ಈ ದೇಶದಲ್ಲಿ ಕರೋನಾ ಸೋಂಕು ಇರುವುದು ಮೊದಲ ಬಾರಿಗೆ ಪತ್ತೆಯಾಗಿದೆ. ಅದೇನೆ ಇರ್ಲಿ ಒಬ್ಬನಿಂದ ಇಷ್ಟೊಂದು ಜನಕ್ಕೆ ಸೋಂಕು ತಗುಲಿರುವುದು ನಿಜಕ್ಕೂ ಆತಂಕದ ಸಂಗತಿ.




Leave a Reply

Your email address will not be published. Required fields are marked *

error: Content is protected !!