ವಿಜಯಪುರದ ಗಾಯಕ್ವಾಡ ಬೌಲಿಂಗ್ ಗೆ ಸೋತ ಪಾಕಿಸ್ತಾನ್

363

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮಿಥಾಲಿ ರಾಜ್ ಪಡೆ 107 ರನ್ ಗಳಿಂದ ಮಣಿಸಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು.

ಭಾರತ ಪರ ಸ್ಮೃತಿ ಮಂದಾನ್ 52, ದೀಪ್ತಿ ಶರ್ಮಾ 40, ಸ್ನೇಹಾ ರಣಾ 53, ಪೂಜಾ ವಸ್ತರ್ಕರ್ 67 ರನ್ ಗಳ ಭರ್ಜರಿ ಆಟದಿಂದಾಗಿ 244 ರನ್ ಗಳಿಸಿತು. ಪಾಕಿಸ್ತಾನ ಪರ ನಸರಾ ಸಂದು 2, ನಿದಾ ದರ್ 2, ದೈನಾ, ಅನಂ, ಫಾತೀಮಾ ಸನಾ ತಲಾ 1 ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಬಿಸ್ಮಾ ಮರೂಫ್ ಟೀಂ ಭಾರತ ಬೌಲಿಂಗ್ ಮುಂದೆ ಮಂಕಾಗಿ 137 ರನ್ ಗಳಿಗೆ ಆಲೌಟ್ ಆಯ್ತು. ಸಿದ್ರಾ ಅಮೀನ್ 30, ದಿನಾ ಬೇಗ್ 24, ಫಾತೀಮಾ ಸನಾ 17, ನಾಯಕಿ ಮರೂಫ್ 15 ರನ್ ಗಳಿಸಿದ್ದೆ ಅಧಿಕ ಸ್ಕೋರ್. ಭಾರತ ಪರ ವಿಜಯಪುರದ ರಾಜೇಶ್ವರಿ ಗಾಯಕ್ವಾಡ 4 ವಿಕೆಟ್ ತೆಗೆದು ಮಿಂಚಿದರು. ಗೋಸ್ವಾಮಿ 2, ರಣಾ 2, ಮೇಘನಾ ಸಿಂಗ್ 1, ದೀಪ್ತಿ ಶರ್ಮಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!