ಎರಡೂವರೆ ವರ್ಷದ ಪುಟಾಣಿಯ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’

345

ಪ್ರಜಾಸ್ತ್ರ ವಿಶೇಷ ವರದಿ

ಧಾರವಾಡ: ಈ ಪುಟಾಣಿಗೆ ಕೇವಲ ಎರಡೂವರೆ ವರ್ಷ. ಈ ವಯಸ್ಸಿನಲ್ಲಿ ಬಹುತೇಕ ಮಕ್ಕಳು ಆಟವಾಡುತ್ತಾ, ತೊದಲು ಮಾತುಗಳನ್ನ ಆಡುತ್ತವೆ. ಆದ್ರೆ, ಈ ಪೋರಿ ಆಗ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ. ಅರೇ ಎರಡೂವರೆ ವರ್ಷದ ಕೂಸು ಏನು ಮಾಡಲು ಸಾಧ್ಯ ಎಂದು ಕೇಳುವವರು ಇದನ್ನ ಓದಲೇಬೇಕು.

ಯೆಸ್, ಧಾರವಾಡ ತಾಲೂಕಿನ ಜೋಡಳ್ಳಿ ಗ್ರಾಮದ ಉಮೇಶ ಮುತ್ತಗಿ ಹಾಗೂ ಸಕ್ಕೂಬಾಯಿ ಅನ್ನೋ ದಂಪತಿಯ ಮಗಳು ವೈಷ್ಣವಿಯ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರಿದೆ. ಕಾರಣ, ವೈಷ್ಣವಿ, ಇತಿಹಾಸದ ಹಾಗೂ ಈಗಿನ ಮಹಾನ ಸಾಧಕರ 170 ಹೆಸರುಗಳನ್ನ, ಸಂಸ್ಕೃತದ ಮಂತ್ರಗಳು, ರಾಷ್ಟ್ರೀಯ ಲಾಂಛನ, ರಾಷ್ಟ್ರಗೀತೆ, ಸೌರಮಂಡಲದ ಗ್ರಹಗಳ ಹೆಸರುಗಳನ್ನ ಪಟಪಟ ಹೇಳುತ್ತಾಳೆ.

ಇದರ ಜೊತೆಗೆ ಗಣಿತದ ಚಿಹ್ನೆಗಳು, ವಾರ, ತಿಂಗಳು, ದೇಹದ ವಿವಿಧ ಭಾಗಗಳು ಹಾಗೂ ಪ್ರಾಣಿ, ಪಕ್ಷಿಗಳ ಅನುಕರಣೆ ಮಾಡುತ್ತಾಳೆ. ಹೀಗೆ ಅರಳುಹುರಿದಂತೆ ಪಟಪಟನೆ ಇದೆಲ್ಲವನ್ನ ಹೇಳುವ ಮೂಲಕ ಕಳೆದ ಮಾರ್ಚ್ ನಲ್ಲಿ ವೈಷ್ಣವಿ ಸಾಧನೆ ಮಾಡಿದ್ದಾಳೆ. ಈ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದ್ದಾಳೆ.

ಇನ್ನು ಬಾಲಕಿಯ ತಂದೆ ಉಮೇಶ ಮುತ್ತಗಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸ್ತಿದ್ದಾರೆ. ಇದೀಗ ಉತ್ತರ ಪ್ರದೇಶದ ಮಥುರಾದಲ್ಲಿ ಭಾರತೀಯ ಸೇನೆಯ 51 ಮೀಡಿಯಂ ರೆಜಿಮೆಂಟ್ ನ ಹವಾಲ್ದಾರರಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಗಳ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!