ವಿಂಡೀಸ್ ವಿರುದ್ಧ ಇಂಡಿಯಾಗೆ ಭರ್ಜರಿ ಗೆಲುವು

356

ಆಂಟಿಗುವಾ: ವೆಸ್ಟ್ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆಲುವು ದಾಖಲಿಸಿದೆ. ಕೆರಿಬಿಯನರ್ ವಿರುದ್ಧ ಬರೋಬ್ಬರಿ 318 ರನ್ ಗಳ ಭರ್ಜರಿ ಅಂತರದಿಂದ ಕೊಹ್ಲಿ ಪಡೆ ಗೆಲುವು ದಾಖಲಿಸಿದೆ.

ಜಸ್ ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ವೆಸ್ಟ್ ವಿಂಡೀಸ್ ಕೇವಲ 100 ರನ್ ಗಳಿಗೆ ಆಲೌಟ್ ಆಗಿದೆ. ಎಂಟು ಓವರ್ ನಲ್ಲಿ ಕೇವಲ 7 ರನ್ ನೀಡಿ ಐದು ಪಡೆಯುವ ಮೂಲಕ ಬುಮ್ರಾ ಮಿಂಚಿದ್ರು. ಅಲ್ದೇ, 11ನೇ ಟೆಸ್ಟ್ ಪಂದ್ಯದಲ್ಲಿಯೇ 50 ವಿಕೆಟ್ ಪಡೆದ ಬುಮ್ರಾ, ಅತಿವೇಗವಾಗಿ ವಿಕೆಟ್ ಕಬಳಿಸಿದ ಭಾರತೀಯ ಆಟಗಾರನೆನಿಸಿಕೊಂಡ.

ಇನ್ನು ಬುಮ್ರಾಗೆ ಸಾಥ್ ನೀಡಿದ ಇಶಾಂತ ಶರ್ಮಾ 3 ಹಾಗೂ ಮಹ್ಮದ ಶೆಮಿ 2 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ್ದ ಭಾರತ 297 ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಪಂದ್ಯವಾಡಿದ ವೆಸ್ಟ್ ವಿಂಡೀಸ್ ಇಶಾಂತ ಶರ್ಮಾ ಬೌಲಿಂಗ್ ದಾಳಿಗೆ 222 ರನ್ ಗಳಿಗೆ ಪತನಕೊಂಡಿತ್ತು.

ಎರಡನೇ ಇನ್ನಿಂಗ್ಸ್ ಶುರು ಮಾಡಿದ ಭಾರತ ಅಜಿಂಕೆ ರಹಾನೆ ಶತಕ ಹಾಗೂ ಹನುಮಾನ ವಿಹಾರಿಯ 93 ರನ್ ಗಳ ಭರ್ಜರಿ ಆಟದಿಂದ 343 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಾಗ ಡಿಕ್ಲೇರ್ ಮಾಡಿಕೊಂಡಿತ್ತು. ಹೀಗಾಗಿ ಆತಿಥೇಯರಿಗೆ 419 ರನ್ ಗಳ ಟಾರ್ಗೆಟ್ ನೀಡಲಾಗಿತ್ತು. ಈ ಸ್ಕೋರ್ ಚೇಸ್ ಮಾಡಿದ ವೆಸ್ಟ್ ವಿಂಡೀಸ್ 100 ರನ್ ಗಳಿಗೆ ಆಲೌಟ್ ಆಯ್ತು.

27 ಟೆಸ್ಟ್ ಪಂದ್ಯವನ್ನ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ವಿರಾಟ ಕೊಹ್ಲಿ, ಧೋನಿ ಗೆಲುವಿನೊಂದಿಗೆ ಸಮಬಲ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ವಿದೇಶದಲ್ಲಿ ಹೆಚ್ಚು ಟೆಸ್ಟ್ ಪಂದ್ಯ ಗೆಲಿಸಿಕೊಟ್ಟ ಸೌರವ ಗಂಗೂಲಿ(11 ಪಂದ್ಯ) ದಾಖಲೆಯನ್ನ ಮುರಿದ್ರು.




Leave a Reply

Your email address will not be published. Required fields are marked *

error: Content is protected !!