ಸೆಮಿ ಫೈನಲ್ ಗೆ ವನಿತೆಯರ ಹಾಕಿ ತಂಡ: ಇತಿಹಾಸ ಬರೆದ ಕುವರಿಯರು

221

ಪ್ರಜಾಸ್ತ್ರ ಕ್ರೀಡಾಸುದ್ದಿ

ಟೊಕಿಯೋ: ಭಾನುವಾರ ಪುರುಷರ ಹಾಕಿ ತಂಡ ಸೆಮಿಫೈನಲ್ ಗೆ ಪ್ರವೇಶ ಪಡೆಯುವ ಮೂಲಕ 49 ವರ್ಷಗಳ ಬಳಿಕ ಈ ಸಾಧನೆ ಮಾಡಿತು. ಸೋಮವಾರ ಮಹಿಳಾ ಹಾಕಿ ತಂಡ ಮೊಟ್ಟ ಮೊದಲ ಬಾರಿಗೆ ಸೆಮಿಫೈನಲ್ ಗೆ ಎಂಟ್ರಿ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಕ್ವಾರ್ಟರ್ ಫೈನಲ್ ನಲ್ಲಿ ಬಿಲಿಷ್ಠ ಆಸೀಸ್ ತಂಡವನ್ನ 1-0 ಅಂತರದಿಂದ ಸೋಲಿಸಿ ಸೆಮಿಗೆ ಪ್ರವೇಶ ಪಡೆದಿದೆ. ಗುರ್ಜಿತ್ ಕೌರ್ ಬಾರಿಸಿದ ಗೋಲು ಭಾರತದ ಸಾಧನೆಗೆ ಕಾರಣವಾಯ್ತು. ಮೊದಲ 3 ಪಂದ್ಯಗಳಲ್ಲಿ ಸೋಲುವ ಮೂಲಕ ನಿರಾಸೆ ಮೂಡಿಸಿತ್ತು. ಆದ್ರೆ, ನಂತರದ ಎರಡು ಪಂದ್ಯಗಳಲ್ಲಿ ಗೆದ್ದು ಕ್ವಾರ್ಟರ್ ಗೆ ಬಂದು ಈಗ ಸೆಮಿ ಫೈನಲ್ ತಲುಪಿದೆ. ಇಡೀ ತಂಡಕ್ಕೆ ಎಲ್ಲಡೆಯಿಂದ ಶುಭಾಶಯಗಳು ಹರಿದು ಬರ್ತಿದ್ದು, ಮತ್ತೊಂದು ಪದಕ ಖಚಿತವಾಗಿದೆ.




Leave a Reply

Your email address will not be published. Required fields are marked *

error: Content is protected !!