27 ಆಟಗಾರರು ರಿಟೇನ್.. ಧೋನಿ ಹಿಂದಿಕ್ಕಿದ 6 ಆಟಗಾರರು..

382

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ 27 ಆಟಗಾರರು ರಿಟೇನ್ ಆಗಿದ್ದಾರೆ. ಸಿಎಸ್ಕೆ ಧೋನಿ ಸೇರಿ 4 ಆಟಗಾರರನ್ನು ಉಳಿಸಿಕೊಂಡಿದೆ. ರಾಜಸ್ಥಾನದಲ್ಲಿ ಸಂಜು ಸ್ಯಾಮ್ಸನ್, ಡೆಲ್ಲಿಯಲ್ಲಿ ರಿಷಬ್ ಪಂತ್ ಸೇರಿ 4 ಆಟಗಾರರು, ಆರ್ ಸಿಬಿಯಲ್ಲಿ ಕೊಹ್ಲಿ, ಹೈದರಾಬಾದ್ ನಲ್ಲಿ ವಿಲಿಯಮ್ಸನ್, ಕೆಕೆಆರ್ ನಲ್ಲಿ ಆಂಡ್ರೋ ರಸಲ್ ಸೇರಿ 4 ಆಟಗಾರರು, ಮುಂಬೈನಲ್ಲಿ ರೋಹಿತ್, ಬೂಮ್ರಾ, ಪಂಜಾಬ್ ನಲ್ಲಿ ಮಯಾಂಕ್ ಅಗರ್ವಾಲ್, ಆರ್ಷದೀಪ್ ಸಿಂಗ್ ಉಳಿಸಿಕೊಂಡಿವೆ.

ಸಿಎಸ್ಕೆಯ ಜಡೇಜಾ 16 ಕೋಟಿ, ಮುಂಬೈನ ರೋಹಿತ್ 16 ಕೋಟಿ, ಕೊಹ್ಲಿ 15 ಕೋಟಿ, ಪಂಜಾಬಿನ ಮಯಾಂಕ್ 14 ಕೋಟಿ, ಹೈದರಾಬಾದಿನ ವಿಲಿಯಮ್ಸನ್ 14 ಕೋಟಿ, ರಾಜಸ್ಥಾನ್ ರಾಯಲ್ಸ್ ನ ಸ್ಯಾಮ್ಸನ್ 14 ಕೋಟಿಗೆ ತನ್ನಲ್ಲಿ ಉಳಿಸಿಕೊಂಡಿದೆ. ಕಳೆದ ಬಾರಿ 15 ಕೋಟಿ ಸಂಭಾವನೆ ಪಡೆದಿದ್ದ ಸಿಎಸ್ಕೆ ಕ್ಯಾಪ್ಟನ್ ಧೋನಿ ಈ ಬಾರಿಗೆ 12 ಕೋಟಿಗೆ ಉಳಿಸಿಕೊಂಡಿದೆ. ಇನ್ನು ಪಂಜಾಬ್ ಕನ್ನಡಿಗ ಕೆ.ಎಲ್ ರಾಹುಲ್ ಗೆ 20 ಕೋಟಿಗೆ ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದ್ದು, ಈ ಮೊತ್ತಕ್ಕೆ ರಾಹುಲ್ ಸೇಲ್ ಆದರೆ ಐಪಿಎಲ್ ನಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಲಿದ್ದಾರೆ.

ಈ ಬಾರಿ ಲಖ್ನೋ ಹಾಗೂ ಅಹಮದಾಬಾದ್ ತಂಡಗಳು ಹೊಸದಾಗಿ ಸೇರಿಕೊಂಡಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ಹೊಸ ತಂಡಗಳು 3 ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಇದರಲ್ಲಿ ಇಬ್ಬರು ಸ್ವದೇಶಿ, ಒಬ್ಬರು ವಿದೇಶಿ ಆಟಗಾರರು ಇರಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!