ರಜನಿ ಸಿನಿಮಾಗಾಗಿ ಕನ್ನಡದ ಚಿತ್ರಕ್ಕೆ ಗೇಟ್ ಪಾಸ್

416

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಇಂದು ವರ್ಲ್ಡ್ ವೈಡ್ ನಟ ರಜನಿಕಾಂತ್, ಶಿವರಾಜಕುಮಾರ್, ಮೋಹನ್ ಲಾಲ್, ತಮನ್ನಾ ಭಾಟಿಯಾ ಸೇರಿ ಘಟಾನುಘಟಿ ಸ್ಟಾರ್ ಗಳಿರುವ ಜೈಲರ್ ಸಿನಿಮಾ ರಿಲೀಸ್ ಆಗಿದೆ. ಇದರಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಕನ್ನಡದ ಚಿತ್ರಕ್ಕೆ ಪೆಟ್ಟು ಬಿದ್ದಿದೆ.

ಹೌದು, ಕಳೆದ ವಾರ ರಿಲೀಸ್ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕೌಶಲ್ಯ ಸುಪ್ರಜಾ ರಾಮಾ ಚಿತ್ರಕ್ಕೆ ಸಿಲಿಕಾನ್ ಸಿಟಿಯಲ್ಲಿನ ಹಲವು ಚಿತ್ರಮಂದಿರಗಳು ಗೇಟ್ ಪಾಸ್ ಕೊಟ್ಟಿವೆ. ತಮಿಳು, ತೆಲುಗಿನಲ್ಲಿ ಜೈಲರ್ ಸಿನಿಮಾ ರಿಲೀಸ್ ಆಗಿದ್ದು, ಬೆಂಗಳೂರಿನಲ್ಲಿಯೇ ನೂರಾರು ಥಿಯೇಟರ್ ಕಿತ್ತುಕೊಂಡಿದೆ.

ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ಕೌಶಲ್ಯ ಸುಪ್ರಜಾ ರಾಮಾ ಚಿತ್ರಕ್ಕೆ ಪೆಟ್ಟು ಬಿದ್ದಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗಿದೆ. ಚಿತ್ರ ತಂಡ ಹಾಗೂ ವಿತರಕ ಕೆವಿಎನ್ ಸಂಸ್ಥೆ ಪತ್ರ ಬರೆಯುವ ಮೂಲಕ ಕನ್ನಡದ ನೆಲದಲ್ಲಿಯೇ ಕನ್ನಡ ಚಿತ್ರಗಳಿಗೆ ಆಗುತ್ತಿರುವ ಅನ್ಯಾಯ ಮುಂದುವರೆದಿದ್ದು, ಆಕ್ರೋಶ ವ್ಯಕ್ತಪಡಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!