‘ಲಾಭಂ’ ಮೊದ್ಲು ಥಿಯೇಟರ್ ಗೆ ಎಂಟ್ರಿ

225

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಸೇತುಪತಿ ಅಭಿನಯದ ಬಹುನಿರೀಕ್ಷಿತ ಲಾಭಂ ಚಿತ್ರ ಮೊದಲು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ನಟ ಸೇತುಪತಿ ಟ್ವೀಟರ್ ಮೂಲಕ ತಿಳಿಸಿದ್ದಾರೆ. ಇದರೊಂದಿಗೆ ಇಷ್ಟು ದಿನಗಳ ಕಾಲ ಡಿಜಿಟಿಲ್ ಮೀಡಿಯಾದಲ್ಲಿ ರಿಲೀಸ್ ಆಗಲಿದೆ ಅನ್ನೋ ಮಾತಿಗೆ ಬ್ರೇಕ್ ಬಿದ್ದಿದೆ.

ಲಾಭಂ ಮೂವಿ ನೆಟ್ ಫ್ಲೆಕ್ಸ್ ನಲ್ಲಿ ಮೊದಲು ರಿಲೀಸ್ ಆಗುತ್ತೆ ಎಂದು ಹೇಳಲಾಗಿತ್ತು. ಅದು ಸುಳ್ಳೆಂದಿರುವ ನಟ ಮೊದಲ ಚಿತ್ರಮಂದರಿಗಳಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ. ಎಸ್.ಪಿ ಜ್ಞಾನನಾಥನ್ ಅವರ ಜೊತೆ 2019ರಲ್ಲಿ ಚಿತ್ರ ಮಾಡಲು ಮುಂದಾದ ವಿಜಯ ಸೇತುಪತಿ 2020ರಲ್ಲಿ ರಿಲೀಸ್ ಆಗಲಿದೆ ಎಂದಿದ್ರು. ಕೋವಿಡ್ ಕಾರಣಕ್ಕೆ ಎಲ್ಲ ಉಲ್ಟಾ ಆಯ್ತು.

ಇದೀಗ ಚಿತ್ರ ಬಿಡುಗಡೆ ಮಾಡಲು ಟೀಂ ರೆಡಿಯಾಗಿದೆ. 2021ರಲ್ಲಿ ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಲಾಭಂ ಎಂಟ್ರಿ ಕೊಡುವ ಸಾಧ್ಯತೆಯಿದ್ದು, ಶೀಘ್ರದಲ್ಲಿ ದಿನಾಂಕ ತಿಳಿಸಲಾಗುವುದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!