ಮೈಸೂರಲ್ಲಿ ಚಿರತೆ ಬದಲು ಬೋನಿಗೆ ಬಿದ್ದ ಮರಿ

173

ಪ್ರಜಾಸ್ತ್ರ ಸುದ್ದಿ

ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಚಿರತೆ ಹಾವಳಿ ಹೆಚ್ಚಾಗಿದೆ. ಜನ, ಜಾನುವಾರುಗಳ ಮೇಲೆ ಹಲವು ಬಾರಿ ದಾಳಿ ನಡೆಸಿದೆ. ಹೀಗಾಗಿ ಜನರು ಜೀವ ಭಯದಲ್ಲಿದ್ದಾರೆ. ಅರಣ್ಯ ಸಿಬ್ಬಂದಿ ಚಿರತೆ ಹಿಡಿಯ ಇಟ್ಟಿದ್ದ ಬೋನಿನಲ್ಲಿ ಚಿರತೆ ಮರಿ ಬಂಧಿಯಾಗಿದೆ.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೋನ್ ಗಳನ್ನು ಇಡಲಾಗಿದೆ. ಬದನಕುಪ್ಪೆ ಗ್ರಾಮದಲ್ಲಿಟ್ಟ ಬೋನಿಗೆ ಚಿರತೆ ಮರಿ ಬಿದ್ದಿದೆ. ಈ ವೇಳೆ ಅರಣ್ಯ ಸಿಬ್ಬಂದಿ ಜೊತೆಗೆ ಗ್ರಾಮಸ್ಥರು ವಾಗ್ವಾದ ನಡೆಸಿದರು. ಚಿರತೆ ದಾಳಿಯಿಂದ ಹಲವು ಜಾನುವಾರಗಳು ಬಲಿಯಾಗಿವೆ. ಹೀಗಾಗಿ ಪರಿಹಾರ ನೀಡಿ ಚಿರತೆ ಮರಿ ತೆಗೆದುಕೊಂಡು ಹೋಗಿ ಎಂದು ಪಟ್ಟು ಹಿಡಿದಿದ್ದರು. ಅರಣ್ಯ ಅಧಿಕಾರಿಗಳು ಪರಿಹಾರದ ಭರವಸೆ ನೀಡಿ ಚಿರತೆ ಮರಿ ತೆಗೆದುಕೊಂಡು ಹೋಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!