ವ್ಯಾಯಾಮದ ಜೊತೆ ಕಾಳುಪುಡಿ ಮಷಿನ್: ಮಹಿಳೆ ಐಡಿಯಾ ಫುಲ್ ವೈರಲ್

334

ಪ್ರಜಾಸ್ತ್ರ ಸುದ್ದಿ

ಮಧ್ಯಪ್ರದೇಶ: ಮಹಿಳೆಯೊಬ್ಬರು ವ್ಯಾಯಾಮ ಮಾಡುವ ಮಷಿನ್ ಜೊತೆಗೆ ಕಾಳನ್ನು ಪುಡಿ ಮಾಡುವಂತೆ ಮಾಡಿದ್ದಾರೆ. ಈ ಮೂಲಕ ಮೇಕ್ ಇನ್ ಇಂಡಿಯಾ ಹಾಗೂ ಫಿಟ್ ಇಂಡಿಯಾ ಎರಡನ್ನೂ ಒಟ್ಟಿಗೆ ಮಾಡಿ ತೋರಿಸಿದ್ದಾರೆ.

ಮಧ್ಯಪ್ರದೇಶದ ಮಹಿಳೆಯೊಬ್ಬರ ಈ ಐಡಿಯಾ ಫುಲ್ ವೈರಲ್ ಆಗಿದೆ. ಪ್ರಿಯಾ ಗುಪ್ತಾ ಎಂಬುವರು ಇದನ್ನ ತಮ್ಮ ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ. ಪೆಡಲ್ ತುಳಿಯುತ್ತಾ ಕಾಳು ಪುಡಿ ಮಾಡಬಹುದಾಗಿದೆ. ಗಿರಣಿ ರೂಪದಲ್ಲಿ ಇದನ್ನ ರೆಡಿ ಮಾಡಲಾಗಿದೆ.

ಈ ಯಂತ್ರದಿಂದ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದಿಷ್ಟು ದೈಹಿಕ ವ್ಯಾಯಾಮವೂ ಆಗುತ್ತೆ. ತಮ್ಮ ಕಾಳು ಕಡಿಗಳನ್ನ ಪುಡಿ ಮಾಡುತ್ತಾ ಕೆಲಸವೂ ಆಗುತ್ತೆ. ನಿಜಕ್ಕೂ ಇದು ಒಂದಿಷ್ಟು ಸಹಾಯವಾಗಲಿದೆ.




Leave a Reply

Your email address will not be published. Required fields are marked *

error: Content is protected !!