ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿ ಅಂದರ್ ಆದ

421

ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಗೆ ಅಶ್ಲೀಲ ವಿಡಿಯೋ ತೋರಿಸಲು ಮುಂದಾದ ಯುವಕ ಇದೀಗ ಕಂಬಿ ಹಿಂದೆ ಸೇರಿದ್ದಾನೆ. ಮಂಗಳೂರು ನಗರದ ಯಯ್ಯಾಡಿಯಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿ ಡೆವಿನ್ ಪಿಂಟೋ ಬೆಂದೂರ್ ವೆಲ್ ನಿವಾಸಿಯಾಗಿದ್ದಾನೆ.

ನಿನ್ನೆ ರಾತ್ರಿ ಶರ್ಬತ್ ಕಟ್ಟೆ ಬಳಿ ಯುವತಿಯನ್ನ ಹಿಂಬಾಲಿಸಿಕೊಂಡು ಬಂದಿದ್ದಾನೆ. ಬಳಿಕ ಯುವತಿಯನ್ನ ಅಡ್ಡಗಟ್ಟಿ, ತನ್ನ ಮೊಬೈಲ್ ನಲ್ಲಿದ್ದ ಅಶ್ಲೀಲ ವಿಡಿಯೋ ತೋರಿಸಿದ್ದಾನಂತೆ. ಈ ವೇಳೆ ಯುವತಿ ಕಿರುಚಿಕೊಂಡಿದ್ದಾಳೆ. ಆಗ ಡವಿನ್ ಪಿಂಟೋ ಓಡಿ ಹೋಗಲು ನೋಡಿದಾಗ, ಸುತ್ತಲಿನ ಜನರು ಹಿಡಿದು ವಿಚಾರಿಸಿದ್ದಾರೆ. ಮಾಹಿತಿ ತಿಳಿದ ಬಳಿಕ, ಪೊಲೀಸರಿಗೆ ಒಪ್ಪಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!