ನಾಯಕತ್ವ ಬದಲಾವಣೆ ಬಗ್ಗೆ ಅರುಣ ಸಿಂಗ್ ಹೇಳಿದ್ದೇನು?

193

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಹಲವು ದಿನಗಳಿಂದ ಕೇಳಿ ಬರ್ತಿವೆ. ಒಂದು ಬೇಡ ಬಿಎಸ್ವೈ ಬೇಡ ಅಂತಿದೆ. ಇನ್ನೊಂದು ಬಣ ಅವರೆ ನಮ್ಮ ನಾಯಕರು ಅಂತಿದೆ. ಮತ್ತೊಂದು ಬಣ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧವೆಂದು ತಟಸ್ಥವಾಗಿ ಉಳಿದಿದೆ.

ಎರಡು ದಿನಗಳಿಂದ ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್, ಇಂದು ಸಚಿವರು, ಶಾಸಕರು ಸೇರಿದಂತೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ರು. ಎಲ್ಲರನ್ನೂ ಒಟ್ಟಿಗೆ ಭೇಟಿಯಾಗದೆ. ಅವರವರಿಗೆ ನೀಡಿದ ಸಮಯಕ್ಕೆ ಭೇಟಿಯಾಗಿ ಮಾತುಕತೆ ನಡೆಸಿದ್ರು. ಇದಾದ ಬಳಿಕ ಮಾಧ್ಯಮದವರ ಜೊತೆಗೆ ಮಾತ್ನಾಡಿದ್ರು.

ಸಚಿವರು, ಶಾಸಕರ ಚರ್ಚೆಯ ವೇಳೆ ನಾಯಕತ್ವ ಬದಲಾವಣೆ ಚರ್ಚೆಯಾಗಿಲ್ಲ. ಒಂದಿಬ್ಬರು ಈ ರೀತಿಯ ಹೇಳಿಕೆಗಳನ್ನ ಕೊಡ್ತಿದ್ದಾರೆ. ಬಿಜೆಪಿಯ ತತ್ವ ಸಿದ್ಧಾಂತ ಗೊತ್ತಿಲ್ಲದ, ಇತ್ತೀಚೆಗೆ ಬಂದ ಒಂದಿಬ್ಬರು ಮಾತ್ನಾಡ್ತಿದ್ದಾರೆ. ಒಂದು ವೇಳೆ ಅವರು ಸುಮ್ಮನಾಗದಿದ್ರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸಿಪಿ ಯೋಗೇಶ್ವರ, ಅರವಿಂದ ಬೆಲ್ಲದ, ಹೆಚ್.ವಿಶ್ವನಾಥ, ಬಸನಗೌಡ ಪಾಟೀಲ ಯತ್ನಾಳ ಸಿಎಂ ವಿರುದ್ಧ ಬ್ಯಾಟ್ ಬೀಸ್ತಿದ್ದಾರೆ. ಎಂ.ಪಿ ರೇಣುಕಾಚಾರ್ಯ, ನಳೀನಕುಮಾರ ಕಟೀಲ, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಹರತಾಳ ಹಾಲಪ್ಪ, ಎಚ್.ಆರ್ ವಿಶ್ವನಾಥ ಸೇರಿ ಇತರರು ಸಿಎಂ ಪರ ಇದ್ದಾರೆ. ಸಿ.ಟಿ ರವಿ, ಆರ್.ಅಶೋಕ, ಕೆ.ಎಸ್ ಈಶ್ವರಪ್ಪ, ಬಿ.ಶ್ರೀರಾಮುಲು ಸೇರಿದಂತೆ ಇತರರು ತಟಸ್ಥವಾಗಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಸಧ್ಯ ಮೂರು ಬಣಗಳು ಇರುವುದು ಮಾತ್ರ ಕಂಡು ಬರ್ತಿದೆ. ಅರುಣ ಸಿಂಗ್ ಇದಕ್ಕೆಲ್ಲ ಫುಲ್ ಸ್ಟಾಪ್ ಇಟ್ಟು ಹೋಗ್ತಾರೋ ಅಥವ ಟು ಬಿ ಕಂಟಿನ್ಯೂ ಅನ್ನೋ ರೀತಿ ಬಿಟ್ಟು ಹೋಗ್ತಾರೋ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!