ಮೋದಿ ಆ ನಾಯಕನನ್ನ ಹೊಗಳಿದ್ದು ನಿಜವೇ? ಬಿಎಸ್ವೈ ಚೆಕ್ ಮೇಟ್ ಆಗ್ತಾರಾ?

533

ಪ್ರಜಾಸ್ತ್ರ ಡೆಸ್ಕ್

ಕರೋನಾ ವಿಚಾರದಲ್ಲಿ ಪ್ರಧಾನಿ ಮೋದಿ, ಬಿಜೆಪಿಯ ಪ್ರಭಾವಿ ನಾಯಕನನ್ನ ಹೊಗಳಿದ್ದಾರಂತೆ. ಅವರು ಸಿಎಂ ಆಗ್ಲಿ, ಶಾಸಕರಾಗ್ಲಿ, ಮಂತ್ರಿಯಾಗ್ಲಿ ಇಲ್ಲ. ಇದ್ಯಾವುದೇ ಸ್ಥಾನಮಾನ ಇಲ್ಲದೆ ಹೋದ್ರೂ ಇವರೆಲ್ಲರಿಗಿಂತ ಪವರ್ ಫುಲ್. ಅವರೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕದ ಬಿ.ಎಲ್ ಸಂತೋಷ.

ಕರೋನಾವನ್ನ ರಾಜ್ಯದಲ್ಲಿ ಕಂಟ್ರೋಲ್ ಮಾಡುವಲ್ಲಿ, ಬಿ.ಎಲ್ ಸಂತೋಷ ಅವರು ತೆರೆ ಮರೆಯಲ್ಲಿ ಭರ್ಜರಿಯಾಗಿ ಕೆಲಸ ಮಾಡಿದ್ದಾರಂತೆ. ಹೀಗಾಗಿ ಪ್ರಧಾನಿ ಮೋದಿ ಅವರನ್ನ ಕರೆಸಿಕೊಂಡು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗ್ತಿದೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಅಲೆಗಳು ಎದ್ದಿವೆ. ರಾಜ್ಯದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪನಾ? ಬಿ.ಎಲ್ ಸಂತೋಷನಾ? ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ. ಅಸಲಿಗೆ ಮೋದಿ ಬಿ.ಎಲ್ ಸಂತೋಷರನ್ನ ಹೊಗಳಿದ್ದು ನಿಜವೇ ಅನ್ನೋ ಪ್ರಶ್ನೆ ಮೂಡಿದೆ.

ಬಿ.ಎಲ್ ಸಂತೋಷ

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನ ಕರೋನಾ ವಿಚಾರದಲ್ಲಿ ಹೊಗಳಿರುವ ಕುರಿತು ಎಲ್ಲಿಯೂ ಸುದ್ದಿಯಾಗಿಲ್ಲ. ಟ್ವೀಟರ್ ನಲ್ಲಿ ಈ ಬಗ್ಗೆ ಯಾರೂ ಬರೆದುಕೊಂಡಿರುವುದು ಕಾಣ್ತಿಲ್ಲ! ಹಾಗಾದ್ರೆ, ಇದು ಸುಳ್ಳಾ? ಅಥವಾ ನಿಜವೇ ಆಗಿದ್ದು, ಬಿಎಸ್ವೈ ಅನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ತೆರೆಮರೆಯಲ್ಲಿ ನಡೆಯುತ್ತಿರುವ ಪ್ಲಾನ್ ಇದ್ಯಾ? ಲಿಂಗಾಯತ ನಾಯಕನ ಜಾಗದಲ್ಲಿ ಬ್ರಾಹ್ಮಣ ನಾಯಕನನ್ನ ತಂದು ಕುಂದಿರಿಸುವ ಕೆಲಸವಾಗ್ತಿದ್ಯಾ?

ಕರೋನಾವನ್ನ ರಾಜ್ಯದಲ್ಲಿ ಕಂಟ್ರೋಲ್ ಮಾಡಲು ಬಿಎಸ್ವೈ ಎಲ್ಲ ರೀತಿಯ ಕಸರತ್ತು ನಡೆಸಿದ್ದಾರೆ. ಪ್ರವಾಹದಿಂದ ಹೈರಾಣಾಗಿ ಹೋಗಿದ್ದ ಬಿಎಸ್ವೈಗೆ ಕರೋನಾ ಕಂಟಕ ಶುರುವಾಯ್ತು. ಹೀಗೆ ಮೇಲಿಂದ ಮೇಲೆ ರಾಜ್ಯದಲ್ಲಿ ಎದುರಾಗುತ್ತಿರುವ ಅಪಾಯಗಳನ್ನ, ಮುನ್ನೆಲೆಯಲ್ಲಿ ನಿಂತು ಕೆಲಸ ಮಾಡ್ತಿರುವ ಸಿಎಂ ಬಿಎಸ್ವೈ ಸೈಡ್ ಲೈನ್ ಮಾಡುವ ಹುನ್ನಾರ ನಡೆಯುತ್ತಿದ್ಯಾ ಅನ್ನೋ ಅನುಮಾನ ಮೂಡಿದೆ. ರಾಜ್ಯ ಬಿಜೆಪಿ ನಾಯಕರ ಮುನಿಸು, ಗುದ್ದಾಟ, ಹುದ್ದೆಯ ಹಂಚಿಕೆ ಬಂದಾಗ, ಬಿ.ಎಲ್ ಸಂತೋಷರ ಪಾತ್ರ ಬಹುಮುಖ್ಯವಾಗಿ ಕೆಲಸ ಮಾಡ್ತಿದೆ ಅನ್ನೋ ಮಾತಿದೆ. ಹೀಗಾಗಿ ಯಡಿಯೂರಪ್ಪನವರನ್ನ ತೆರೆಯ ಹಿಂದಕ್ಕೆ ಸರಿಸಿ, ಬಿ.ಎಲ್ ಸಂತೋಷರನ್ನ ತೆರೆ ಮುಂದೆ ತರುವ ಕೆಲಸಕ್ಕೆ ಮೋದಿ ಕೈ ಹಾಕಿದ್ದೆ ಆದ್ರೆ, ಕಷ್ಟದ ಕೆಲಸವಲ್ಲ.

ಕರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ, ಬಿ.ಎಲ್ ಸಂತೋಷರನ್ನ ಹೊಗಳಿದ್ದಾರೆ ಅನ್ನೋ ವಿಚಾರವೇ ಸ್ಪಷ್ಟವಾಗಿಲ್ಲದಿದ್ರೂ ವ್ಯಾಪಕ ಚರ್ಚೆ ನಡೆಯುತ್ತಿದೆ ಅಂದ್ರೆ, ಅವರ ಉದ್ದೇಶ ಈಡೇರುತ್ತಿದೆ. ಈ ಮೂಲಕ ಕೇಂದ್ರ ಹಾಗೂ ರಾಜ್ಯದ ಕೆಲ ನಾಯಕರಿಗೆ ಮೊದ್ಲೇ ಬೇಡದ ಲೀಡರ್ ಆಗಿರುವ ಬಿಎಸ್ವೈ ಅನ್ನ ಚೆಕ್ ಮೇಟ್ ಮಾಡುವ ದಿನಗಳು ದೂರವಿಲ್ಲವೆಂದು ಹೇಳಬಹುದು.


TAG


Leave a Reply

Your email address will not be published. Required fields are marked *

error: Content is protected !!