ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ಸಭೆ

354

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಂದು ದ್ವಿಪಕ್ಷೀಯ ಸಭೆ ನಡೆಯಲಿದೆ. ವರ್ಷುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನಡುವೆ ಮಾತುಕತೆ ನಡೆಯಲಿದೆ.

ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಹಾಗೂ ವಾಣಿಜ್ಯೋದ್ಯಮ ಸಂಬಂಧ ಚರ್ಚೆ ನಡೆಲಿದೆ. ಇದರ ಜೊತೆಗೆ ಕರೋನಾನಿಂದ ಪಾರಾಗುವುದು ಹೇಗೆ ಅನ್ನೋದರ ಕುರಿತು ಸಹ ಚರ್ಚೆ ನಡೆಯಲಿದೆ. ಇನ್ನು ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರದಲ್ಲಿ ಒಪ್ಪಂದ ನಡೆಯಲಿದೆ ಎಂದು ಹೇಳಲಾಗ್ತಿದೆ.

ಜನವರಿ 13 ರಿಂದ 16ರ ವರೆಗೂ ಭಾರತ ಪ್ರವಾಸ ಮಾಡಬೇಕಿದ್ದ ಆಸೀಸ್ ಪ್ರಧಾನಿ, ಅದು ಸಾಧ್ಯವಾಗಿರ್ಲಿಲ್ಲ. ಅಲ್ದೇ, ಆಸ್ಟ್ರೇಲಿಯಾದಲ್ಲಿ ಅರಣ್ಯನಾಶ ಪ್ರಕರಣದಿಂದಾಗಿ ಮತ್ತೆ ಬರಲು ಆಗ್ಲಿಲ್ಲ. ಕರೋನಾ ಹಾವಳಿ ಬೇರೆ ಶುರುವಾಯ್ತು. ಹೀಗಾಗಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!