‘ಮರಣ ಪ್ರಮಾಣಪತ್ರಗಳ ಮೇಲೂ ಮೋದಿ ಫೋಟೋ ಹಾಕಿಸಿ’

260

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಲಸಿಕೆ ಪ್ರಮಾಣ ಪತ್ರ ಸೇರಿದಂತೆ ಎಲ್ಲದರ ಮೇಲೆ ಪ್ರಧಾನಿ ಮೋದಿ ಫೋಟೋ ಹಾಕ್ತಿರುವುದಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದು, ಮರಣ ಪ್ರಮಾಣ ಪತ್ರಗಳ ಮೇಲೂ ಮೋದಿ ಫೋಟೋ ಹಾಕಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನಿ ಮೋದಿ ಫೋಟೋ ಹಾಕಬೇಕು ಅನ್ನೋ ವಿಚಾರದ ಬಗ್ಗೆ ಟಿಎಂಸಿ ಸಂಸದ ಡೆರೆಕ್ ಓಬ್ರಿಯನ್ ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದು, ಪ್ರಧಾನಿ ಫೋಟೋ ತೆಗೆದು ಹಾಕುವಂತೆ ಸೂಚಿಸಬೇಕು ಎಂದಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ಹೀಗಾಗಿ ಲಸಿಕೆ ಪ್ರಮಾಣ ಪತ್ರಗಳ ಮೇಲಿನ ಫೋಟೋ ತೆಗೆಸಬೇಕು ಎಂದಿದ್ದಾರೆ. ಆದ್ರೆ, ಇದನ್ನು ಬಿಜೆಪಿ ಸಮರ್ಥಿಸಿಕೊಂಡಿದ್ದು, ಫೋಟೋ ಜೊತೆಗೆ ಜಾಗೃತಿ ಮೂಡಿಸುವ ಸಂದೇಶವಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!