ಭಾರತ-ಅಮೆರಿಕ ನಡುವೆ ಮೂರು ಪ್ರಮುಖ ಒಪ್ಪಂದಗಳು

342

ನವದೆಹಲಿ: ಭಾರತ ಹಾಗೂ ಅಮೆರಿಕ ನಡುವೆ ಮೂರು ಪ್ರಮುಖ ಒಪ್ಪಂದಗಳನ್ನ ಮಾಡಿಕೊಳ್ಳಲಾಗಿದೆ. 3 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ಸೇರಿದಂತೆ ಆರೋಗ್ಯ ಕ್ಷೇತ್ರ ಹಾಗೂ ತೈಲ ವ್ಯಾಪಾರ ಕ್ಷೇತ್ರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇಲ್ಲಿನ ಹೈದ್ರಾಬಾದ್ ಹೌಸ್ ನಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿದ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್, ಜಗತ್ತಿನ ಅತ್ಯಾಧುನಿಕ ಅಪಾಚಿ ಎಂಹೆಚ್ 60 ಹೆಲಿಕಾಪ್ಟರ್ ಖರೀದಿಗೆ ಎರಡು ದೇಶಗಳು ಒಪ್ಪಂದ ಮಾಡಿಕೊಂಡಿವೆ. ಇನ್ನು ಮಾನಸಿಕ ಆರೋಗ್ಯ ಬಗ್ಗೆ ದ್ವಿಪಕ್ಷೀಯ ಮಾತುಕತೆಯಾಗಿದ್ದು, ಆರೋಗ್ಯ ಉಪಕರಣಗಳ ರಕ್ಷಣೆ, ತೈಲಕ್ಷೇತ್ರದಲ್ಲಿ ಸಹಕಾರ ನೀಡುವ ಕುರಿತು ಚರ್ಚೆ ನಡೆಸಲಾಗಿದೆ ಅಂತಾ ತಿಳಿಸಿದ್ದಾರೆ.

ಉಗ್ರವಾದ ಮಟ್ಟ ಹಾಕಲು ರಕ್ಷಣೆ ಹಾಗೂ ಭದ್ರತೆ ಒಪ್ಪಂದ, ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ತೈಲ ವ್ಯಾಪಾರ ಚರ್ಚೆ, ಡ್ರಗ್ಸ್ ಮಾಫಿಯಾಗೆ ಬ್ರೇಕ್ ಹಾಕಲು ಆರೋಗ್ಯ ವಲಯದೊಂದಗಿನ ಹಲವು ವಿಷಯಗಳಲ್ಲಿ ಭಾರತ ಹಾಗೂ ಅಮೆರಿಕ ಒಡಂಬಡಿಕೆ ಮಾಡಿಕೊಂಡಿವೆ. ಹೀಗೆ ಎರಡು ದಿನಗಳ ಭಾರತ ಪ್ರವಾಸದಲ್ಲಿ ಅಮೆರಿಕ ಅಧ್ಯಕ್ಷರು ಭಾರತದೊಂದಿಗೆ ಪ್ರಮುಖ ಕ್ಷೇತ್ರದಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!