ರಾಜಧಾನಿಯಲ್ಲಿ ಡಬಲ್ ಮರ್ಡರ್

256

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ತಾಯಿ ಹಾಗೂ ಮಗನನ್ನ ಕೊಲೆ ಮಾಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಓರಿಸ್ಸಾ ಮೂಲದ ತಾಯಿ ಹಾಗೂ ಮಗ ಕೇವಲ 20 ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದರಂತೆ. ಬುಧವಾರ ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ಕೊಲೆ ನಡೆದಿದೆ ಎನ್ನಲಾಗ್ತಿದೆ.

ಮಮತಾ ಬಸು(75) ಹಾಗೂ ಪುತ್ರ ದೇವಬ್ರತಾ(45) ಕೊಲೆಯಾದವರು ಎಂದು ತಿಳಿದು ಬಂದಿದೆ. ಕಾಲೇಜೊಂದರಲ್ಲಿ ಉಪನ್ಯಾಸಕ ಹುದ್ದೆ ಸಿಕ್ಕ ಪರಿಣಾಮ 20 ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಜೆ.ಪಿ ನಗರದ ಸಂತೃಪ್ತಿ ಬಡಾವಣೆಯಲ್ಲಿ ಮನೆ ಬಾಡಿಗೆ ಹಿಡಿದಿದ್ದರು.

ಚಿನ್ನಾಭರಣ ಸಂಬಂಧ ಕೊಲೆ ನಡೆದಿದ್ಯಾ ಅಥವ ಯಾವುದಾದರೂ ಹಳೆಯ ವಷಮ್ಯಕ್ಕೆ ಕೊಲೆ ನಡೆದಿದೆಯಾ ಅನ್ನೋದರ ಅನುಮಾನ ಮೂಡಿದೆ. ಯಾಕಂದ್ರೆ ಕೇವಲ 20 ದಿನಗಳ ಹಿಂದೆಯಷ್ಟೇ ಓರಿಸ್ಸಾದಿಂದ ಬಂದವರ ಕೊಲೆಯಾಗಿರುವುದು ಹಲವು ಅನುಮಾನಗಳನ್ನ ಮೂಡಿಸಿದೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!