ಸಂಸದ ಹೆಗಡೆ ಟ್ವೀಟರ್ ಖಾತೆ ಲಾಕ್

409

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ, ಅನಂತಕುಮಾರ ಹೆಗಡೆ ಅವರ ಟ್ವೀಟರ್ ಖಾತೆಯನ್ನ ಲಾಕ್ ಮಾಡಲಾಗಿದೆ. ನಿಮ್ಮ ಖಾತೆ ನಮ್ಮ ಕೆಲವು ನಿಯಮಗಳನ್ನ ಉಲ್ಲಂಘಿಸಿದೆ ಎಂದು ಹೇಳಿ ಲಾಕ್ ಮಾಡಲಾಗಿದೆ.

ಇದನ್ನ ಹೆಗಡೆ ಗಮನಕ್ಕೆ ತಂದಿರುವ ಟ್ವೀಟರ್ ಸಂಸ್ಥೆ, ಪೋಸ್ಟ್ ಮಾಡಿರುವ ಬರಹವನ್ನ ಡಿಲೀಟ್ ಮಾಡಿಯೆಂದು ಸೂಚಿಸಿದೆ. ಏಪ್ರಿಲ್ 8ರಿಂದ ತಬ್ಲೀಗ್ ಜಮಾತ್ ವಿರುದ್ಧ ಸಂಸದ ಹೆಗಡೆ ಸರಣಿ ಟ್ವೀಟ್ ಶುರು ಮಾಡಿದ್ರು. ತಬ್ಲೀಗ್ ಗಳು ಕರೋನಾ ಜಿಹಾದ್ ಮಾಡ್ತಿದ್ದಾರೆ ಎಂದು ಸುದೀರ್ಘ ಬರಹವನ್ನ ಪೋಸ್ಟ್ ಮಾಡಿದ್ರು. ಇದನ್ನ ನೆಪವಾಗಿಟ್ಟುಕೊಂಡು ನನ್ನ ಖಾತೆಯನ್ನ ಲಾಕ್ ಮಾಡಲಾಗಿದೆ ಎಂದು ಸಂಸದ ಕಿಡಿ ಕಾರಿದ್ದಾರೆ.

ನಾನು ಡಿಲೀಟ್ ಮಾಡುವುದಿಲ್ಲ. ಟ್ವೀಟರ್ ಭಾರತ ವಿರೋಧಿ ಚಟುವಟಿಕೆ ಮಾಡುವವರಿಗೆ ಉತ್ತೇಜನ ನೀಡ್ತಿದೆ ಎಂದು ಆರೋಪಿಸಿದ್ದಾರೆ. ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಹೆಗಡೆ ಟ್ವೀಟರ್ ಅಕೌಂಟ್ ನಲ್ಲಿ 74, 300 ಜನ ಫಾಲೋವರ್ಸ್ ಇದ್ದರು.




Leave a Reply

Your email address will not be published. Required fields are marked *

error: Content is protected !!