ಬಿಜೆಪಿ ಸರ್ಕಾರದ ವರ್ಷದ ಸಾಧನೆಯ ಪುಸ್ತಕ ಬಿಡುಗಡೆ

300

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ತುಂಬಿದೆ. ಈ ಶುಭಾಸಮಾರಂಭದಲ್ಲಿ ಸರ್ಕಾರದಿಂದ ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಡಲಾಗಿದೆ. ಜನಸ್ನೇಹಿ ಆಡಳಿತಕ್ಕೆ 1 ವರ್ಷ ಅನ್ನೋ ಹೆಸರಿನೊಂದಿಗಿನ ಕಾರ್ಯಕ್ರಮದಲ್ಲಿ ‘ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ’ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯ್ತು.

ವಿಧಾನಸೌದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಈ ವೇಳೆ ಮಾತ್ನಾಡಿದ ಸಿಎಂ, ತಮ್ಮ ಒಂದು ವರ್ಷದಲ್ಲಿ ನಾಡಿನ ಜನತೆಗೆ ಯಾವೆಲ್ಲ ರೀತಿಯ ಯೋಜನೆಗಳ ಮೂಲಕ, ಅಭಿವೃದತ್ತ ತೆಗೆದುಕೊಂಡು ಹೋಗ್ತಿದ್ದೇವೆ ಎಂದು ತಿಳಿಸಿದ್ರು.

ಪ್ರವಾಹ ಸಂದರ್ಭದಲ್ಲಿ ಮಾಡಿದ ಕೆಲಸ, ಇದಾದ್ಮೇಲೆ ಕರೋನಾ ಟೈಂನಲ್ಲಿ ಮಾಡ್ತಿರುವ ಕೆಲಸದ ಕುರಿತು ಮೆಲಕು ಹಾಕಿದ್ರು. ರಾಜ್ಯದ ಪ್ರತಿ ವರ್ಗದ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಯಾರೂ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲವೆಂದು ಹೇಳಿದ್ರು.

ಈ ವೇಳೆ ಕಂದಾಯ ಸಚಿವ ಆರ್.ಅಶೋಕ, ಶಿಕ್ಷಣ ಸಚಿವ ಸುರೇಶಕುಮಾರ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ ಸೇರಿದಂತೆ ಸಚಿವರು, ಶಾಸಕರು, ಸಂಸದರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!