ಪರಿಷತ್ ಚುನಾವಣೆ: ಏಳೂ ಅಭ್ಯರ್ಥಿಗಳು ಅವಿರೋಧ ಆಯ್ಕೆ

449

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ 7 ವಿಧಾನ ಪರಿಷತ್ ಚುನಾವಣೆ ಜೂನ್ 29ರಂದು ನಡೆಯಬೇಕಿತ್ತು. ಆದ್ರೆ, ಇದೀಗ ಏಳೂ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಯಾಕಂದ್ರೆ, ನಾಮಪತ್ರ ಸಲ್ಲಿಸಲು ಇವತ್ತು ಕೊನೆಯ ದಿನ. ಸಲ್ಲಿಸಿರುವುದು 7 ಅಭ್ಯರ್ಥಿಗಳು. ಇರೋದು 7 ಸ್ಥಾನ. ಹೀಗಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ಬಿಜೆಪಿ ಸದಸ್ಯರು

ಬಿಜೆಪಿಯಿಂದ ಎಂಟಿಬಿ ನಾಗರಾಜ, ಸುನಿಲ ವಲ್ಯಾಪುರೆ, ಆರ್.ಶಂಕರ ಹಾಗೂ ಪ್ರತಾಪ ಸಿಂಹ ನಾಯಕ ಸ್ಪರ್ಧಿಸಿದ್ರು. ಕಾಂಗ್ರೆಸ್ ನಿಂದ ಬಿ.ಕೆ ಹರಿಪ್ರಸಾದ ಹಾಗೂ ನಾಸೀರ ಅಹ್ಮದ, ಜೆಡಿಎಸ್ ನಿಂದ ಕೋಲಾರದ ಇಂಚರ ಗೋವಿಂದರಾಜು ಸ್ಪರ್ಧಿಸಿದ್ರು. ಇವರೆಲ್ಲ ಅವಿರೋಧ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಸದಸ್ಯರು

ಬಿಜೆಪಿ 116 ಶಾಸಕರನ್ನ, ಕಾಂಗ್ರೆಸ್ 68 ಶಾಸಕರನ್ನ ಹಾಗೂ ಜೆಡಿಎಸ್ 34 ಶಾಸಕರನ್ನ ಹೊಂದಿವೆ. ಇದ್ರಿಂದಾಗಿ ಪರಿಷತ್ ನಲ್ಲಿ ಗೆಲ್ಲಲು ಒಬ್ಬರಿಗೆ 33 ಸದಸ್ಯರ ಬೆಂಬಲ ಬೇಕಿತ್ತು. ಹೀಗಾಗಿಯೇ ಬಿಜೆಪಿ 4, ಕಾಂಗ್ರೆಸ್ 2, ಜೆಡಿಎಸ್ 1 ಸದಸ್ಯರನ್ನ ಆಯ್ಕೆ ಮಾಡಬೇಕಿತ್ತು. ಅದರಂತೆ ಸ್ಪರ್ಧಿಸಿದ್ದು ಅವಿರೋಧ ಆಯ್ಕೆಯಾಗಿದ್ದು, ಸಂಜೆ ಅಧಿಕೃತ ಘೋಷಣೆ ಹೊರ ಬೀಳಲಿದೆ.

ಜೆಡಿಎಸ್ ಗೋವಿಂದರಾಜು(ಎಡದಿಂದ ಮೊದಲನೆಯವರು)

ಇತ್ತೀಚೆಗೆ ರಾಜ್ಯಸಭೆಗೆ ನಡೆದ 4 ಸ್ಥಾನಗಳ ಚುನಾವಣೆಯಲ್ಲಿಯೂ ಅವಿರೋಧ ಆಯ್ಕೆಯಾಗಿದ್ದಾರೆ. ಬಿಜೆಪಿಯ 2, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ತಲಾ ಒಬ್ಬರು ಆಯ್ಕೆಯಾದರು.




Leave a Reply

Your email address will not be published. Required fields are marked *

error: Content is protected !!