ಹೆಣ್ಮಕ್ಕಳ ತಿಂಗಳ ನೋವು ಶಮನಕ್ಕೆ ಮನೆಮದ್ದು

404

ಪ್ರಜಾಸ್ತ್ರ ಸ್ಪೆಷಲ್ ಡೆಸ್ಕ್

ಹೆಣ್ಮಕ್ಕಳ ಜೀವನ ಅನ್ನೋದು ಸದಾ ಪರೀಕ್ಷೆಗೆ ಒಳಪಡುತ್ತಲೇ ಇರುತ್ತೆ. ಪುರುಷ ಪ್ರಧಾನ ಸಮಾಜದಲ್ಲಿ ಆಕೆ ನೋವುಗಳು ಒಂದಾ ಎರಡಾ. ಇದರ ಜೊತೆಗೆ ಪ್ರಕೃತಿದತ್ತವಾಗಿ ಒಂದಿಷ್ಟು ನೋವು, ಸಂಕಟವಿದೆ. ಅದರಲ್ಲಿ ಪ್ರತಿ ತಿಂಗಳು ಮುಟ್ಟಾಗುವ ಸಮಯ. ಈ ವೇಳೆ ಆಕೆಗೆ ಅಸಾಧ್ಯವಾದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತೆ.

ಹೀಗೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಕಿಬ್ಬೊಟ್ಟೆ ನೋವಿಗೆ ಮನೆಮದ್ದು ಇದ್ದು, ಇದನ್ನ ಹೆಣ್ಮಕ್ಕಳು ಬಳಸಬಹುದು.

ಮುಟ್ಟಿನ ಸಮಯದಲ್ಲಿ ಮೆಂತೆಯನ್ನ ನೀರಿಗೆ ಹಾಕಿ ಕುದಿಸಿ ಕುಡಿಯುವುದ್ರಿಂದ ನೋವು ಕಡಿಮೆಯಾಗುತ್ತೆ

ಜೀರಿಗೆ ನೀರು ಸಹ ಒಳ್ಳೆಯದು. ಆ ಸಮಯದಲ್ಲಿ ಜೀರಿಗೆ ನೀರು ಕುಡಿದರೆ ನೋವು ಶಮನವಾಗುತ್ತೆ

ಬ್ಲ್ಯಾಕ್ ಟೀಗೆ ಶುಂಠಿ ಸೇರಿಸಿ ಕುಡಿಯುವುದ್ರಿಂದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುವುದಿಲ್ಲ

ಎಳೆನೀರು ಹಲವು ರೋಗಗಳಿಗೆ ಮದ್ದು. ಅದೇ ರೀತಿ ಮುಟ್ಟಿಗೂ ಎಳೆನೀರು ಮದ್ದಾಗಿದೆ

ಹಾಟ್ ಬ್ಯಾಗ್ ಇಡುವುದ್ರಿಂದಲೂ ಹೊಟ್ಟೆ ನೋವು ಕಡಿಮೆಯಾಗುತ್ತೆ

ಈ ಮೇಲಿನ ಕೆಲವೊಂದು ನೈಸರ್ಗಿಕವಾಗಿ ಸಿಗುವ, ಮನೆಯಲ್ಲಿ ಸದಾ ಇರುವ ಪದಾರ್ಥಗಳನ್ನ ಬಳಸಿಕೊಂಡು ತಿಂಗಳ ಅವಧಿಯಲ್ಲಿ ಅನುಭವಿಸುವ ನೋವಿನಿಂದ ಪರಾಗಬಹುದು.




Leave a Reply

Your email address will not be published. Required fields are marked *

error: Content is protected !!