ಪ್ರಜಾಸ್ತ್ರ ಸುದ್ದಿ
ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆ ನಂಬುವುದಕ್ಕೆ ಸ್ವಲ್ಪ ಕಷ್ಟವಾದ್ರೂ ಇದು ಸತ್ಯ. ಒಬ್ಬ ಶಿಕ್ಷಕಿ ಏಕಕಾಲದಲ್ಲಿ 25 ಕಡೆ ಕೆಲಸ ಮಾಡಲು ಸಾಧ್ಯವೇ ಅನ್ನೋ ಪ್ರಶ್ನೆಗೆ ಹೌದು ಅನ್ನೋ ಉತ್ತರವಿದೆ. ಆದ್ರೆ, ಅದು ಅಕ್ರಮವಾಗಿ ಸಾಧ್ಯ.
ಶಿಕ್ಷಕಿಯೊಬ್ಬರು ಬರೋಬ್ಬರಿ 25 ಸರ್ಕಾರಿ ಶಾಲೆಯಲ್ಲಿ ಕಳೆದ 13 ತಿಂಗಳಿನಿಂದ ಕೆಲಸ ಮಾಡಿರುವುದಕ್ಕೆ 1 ಕೋಟಿ ಸಂಬಳ ಪಡೆದಿದ್ದಾಳೆ. ಇತ್ತೀಚೆಗೆ ಶಿಕ್ಷಕರ ಡಾಟಾ ಎಂಟ್ರಿ ಕೆಲಸದ ಟೈಂನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಇದ್ರಿಂದ ಇಡೀ ದೇಶದ ಜನತೆ ಕನ್ಫ್ಯೂಸ್ ಆಗಿತ್ತು. ಇದೀಗ ಆಕೆ ಅರೆಸ್ಟ್ ಆಗಿದ್ದಾಳೆ.
ಫರೀದಪುರ ಕೆಜಿಬಿವಿ ಶಾಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿದ್ದ ಶಿಕ್ಷಕಿ, ಇತ್ತರೆ 25 ಕಡೆ ಕೆಲಸ ಮಾಡಿದಂತೆ ತೋರಿಸಿ ಬರೋಬ್ಬರಿ 1 ಕೋಟಿ ಸಂಬಳ ಪಡೆದಿದ್ದಾಳೆ. ಹೀಗಾಗಿ ವಂಚನೆ ಕೇಸ್ ಸಂಬಂಧ ಬಂಧಿಸಲಾಗಿದೆ.