ಬ್ರೇಕಿಂಗ್ ನ್ಯೂಸ್: ಲೈಟ್ ಆಫ್ ಮಾಡಿ ದೀಪ ಬೆಳಗಿಸಿ ಎಂದು ಮೋದಿ

458

ನವದೆಹಲಿ: ಇಂದು ಬೆಳಗ್ಗೆ ನಾನು ವಿಡಿಯೋ ಸಂದೇಶವೊಂದನ್ನ ನೀಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ರು. ಆ ವಿಡಿಯೋ ಬಿಡುಗಡೆಯಾಗಿದ್ದು, ಟ್ವೀಟರ್ ಮೂಲಕ ದೇಶದ ಜನತೆಯಲ್ಲಿ ಪ್ರಧಾನಿ ಮೋದಿ ಮನವಿಯೊಂನ್ನ ಮಾಡಿಕೊಂಡಿದ್ದಾರೆ.

https://twitter.com/narendramodi/status/1245916540819525635?s=20

ಕರೋನಾ ವಿರುದ್ಧ ನಾವು ಹೋರಾಡಲು ಸಕಲ ರೀತಿಯಿಂದ ಸಿದ್ಧರಾಗಬೇಕಿದೆ. ಲಾಕ್ ಡೌನ್ ಆಗಿ ಇಂದಿಗೆ 9 ದಿನವಾಗಿದೆ. ಇಂಥಾ ಸಂದರ್ಭದಲ್ಲಿ ಇದಕ್ಕಾಗಿ ದುಡಿಯುತ್ತಿರುವ ಜನತೆಗೆ ಧನ್ಯವಾದಗಳನ್ನ ಸಲ್ಲಿಸೋಣ. ಇದರ ಜೊತೆ ಕರೋನಾ ವಿರುದ್ಧ ಹೋರಾಡಲು ಎಲ್ಲರಿಗೂ ಧನ್ಯವಾದಗಳನ್ನ ಸಲ್ಲಿಸಲು ಏಪ್ರಿಲ್ 5ರ ರಾತ್ರಿ 9 ಗಂಟೆಗೆ ಎಲ್ಲ ಲೈಟ್ ಗಳನ್ನ ಆಫ್ ಮಾಡಿ 9 ನಿಮಿಷ ದೀಪ ಬೆಳಗಿಸಿ ಕರೋನಾ ವಿರುದ್ಧ ಸಮರ ಸಾರೋಣ ಎಂದಿದ್ದಾರೆ.

ನಿಮ್ಮ ಮನೆಯ ಎಲ್ಲ ಲೈಟ್ಸ್ ಆಫ್ ಮಾಡಿ ದೀಪ ಹಚ್ಚಿ, ಮೇಣದ ಬತ್ತಿ ಹಚ್ಚಿ, ಮೊಬೈಲ್ ಟಾರ್ಚ್ ಗಳನ್ನ ನಿಮ್ಮ ಮನೆಯ ಬಾಲ್ಕನಿಯ ಮೇಲೆ ಬಳಗಿಸುವ ಮೂಲಕ ಕರೋನಾ ವಿರುದ್ಧ ಹೋರಾಡಬೇಕಿದೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!