ಏಕಕಾಲದಲ್ಲಿ 5 ವಂದೇ ಭಾರತ್ ರೈಲಿಗಳಿಗೆ ಪ್ರಧಾನಿ ಚಾಲನೆ

103

ಪ್ರಜಾಸ್ತ್ರ ಸುದ್ದಿ

ಭೋಪಾಲ್: ಪ್ರಧಾನಿ ಮೋದಿ ಮಂಗಳವಾರ ಏಕಕಾಲದಲ್ಲಿ 5 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಾಣದ ಮೂಲಕ ದೇಶದ ವಿವಿಧಡೆ 5 ರೈಲುಗಳಿಗೆ ಚಾಲನೆ ನೀಡಿದರು.

ರಾಣಿ ಕಮಲಾಪತಿ ಭೋಪಾಲ್-ಜಬಲ್ ಪುರ್, ಖುಜುರಾಹೋ-ಭೋಪಾಲ್-ಇಂದೋರ್, ಗೋವಾದ ಮಡಗಾಂವ್-ಮುಂಬೈ, ಕರ್ನಾಟಕದ ಧಾರವಾಡ-ಬೆಂಗಳೂರು, ಬಿಹಾರದ ಹಟಿಯಾ-ಪಾಟ್ನಾ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಈ ವೇಳೆ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹಾಜರಿದ್ದರು.

ಇನ್ನು ಕರ್ನಾಟಕದ ಧಾರವಾಡದಲ್ಲಿ ಚಾಲನೆ ಸಿಕ್ಕ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಸಿರು ನಿಶಾನೆ ತೋರಿಸಿದರು.




Leave a Reply

Your email address will not be published. Required fields are marked *

error: Content is protected !!