ಮೋದಿ ಹೋದ ಮೂರೇ ದಿನಕ್ಕೆ ಹಾಳಾದ ರಸ್ತೆ

367

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಎರಡು ದಿನ ಕರ್ನಾಟಕದಲ್ಲಿದ್ದ ಪ್ರಧಾನಿ ಮೋದಿ ಒಟ್ಟು 20 ಗಂಟೆ ಕರ್ನಾಟಕದಲ್ಲಿ ಕಳೆದಿದ್ದಾರೆ. ಅದರಲ್ಲಿ 4 ಗಂಟೆ ಬೆಂಗಳೂರಿನಲ್ಲಿದ್ದರು. ಇದಕ್ಕಾಗಿ ಬಿಬಿಎಂಪಿ 14 ಕೋಟಿ ರೂಪಾಯಿ ಖರ್ಚು ಮಾಡಿದೆ. ಬಿಬಿಎಂಪಿ ಕಾಮಗಾರಿ ಎಷ್ಟೊಂದು ಕಳಪೆ ಅನ್ನೋದಕ್ಕೆ ಕೊಮ್ಮಘಟ್ಟ ರಸ್ತೆ ಹಾಳಾಗಿರುವುದೇ ಸಾಕ್ಷಿ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಅವರು ಸಂಚರಿಸುವ ರಸ್ತೆಗಳನ್ನು ಭರ್ಜರಿಯಾಗಿ ರಿಪೇರಿ ಮಾಡಲಾಗಿತ್ತು. ಈ ನೆಪದಲ್ಲಾದರೂ ರಸ್ತೆ, ಚರಂಡಿ, ಪುಟ್ ಪಾತ್ ಸರಿಯಾಯಿತು ಅಂದುಕೊಂಡಿದ್ದ ಸಾರ್ವಜನಿಕರಿಗೆ, ಬಿಬಿಎಂಪಿಯ ಕಳಪೆ ಕಾಮಗಾರಿ ಮೂರೇ ದಿನಕ್ಕೆ ಗೊತ್ತಾಗಿದೆ.

ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಮೋಹನ್ ಪ್ರಸಾದ್, ಕಾಮಗಾರಿ ಸಂದರ್ಭದಲ್ಲಿ ಮಳೆಯಾಗುತಿತ್ತು. ಟಾರ್ ಸರಿಯಾಗಿ ಕುಳಿತಿಲ್ಲ. ಹೀಗಾಗಿ ಕೆಲವೊಂದು ಕಡೆ ಹಾಳಾಗಿದೆ. ಗುತ್ತಿಗೆದಾರನ ವೆಚ್ಚದಲ್ಲಿಯೇ ಮತ್ತೆ ಕಾಮಗಾರಿ ಮಾಡುತ್ತೇವೆ ಎಂದಿದ್ದಾರೆ. ಆದರೆ, ಸಾರ್ವಜನಿಕರು ಅಧಿಕಾರಿಗಳು, ಗುತ್ತಿಗೆದಾರರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!