ಪ್ರಜಾಸ್ತ್ರ 2ರ ಸಂಭ್ರಮ ಸಡಗರ

386

ಪ್ರಜಾಸ್ತ್ರ ಸುದ್ದಿ

ಧಾರವಾಡ: ಪ್ರಜಾಸ್ತ್ರ ವೆಬ್ ಪತ್ರಿಕೆಯ 2ರ ವಾರ್ಷಿಕೋತ್ಸವದ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ, ನಗರದ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನಡೆಯಿತು. ಸಸಿಗೆ ನೀರೂಣಿಸುವ ಮೂಲಕ ಕಾರ್ಯಕ್ರಮವನ್ನು ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಲಿಂಗರಾಜ ಅಂಗಡಿ, ಇವತ್ತಿನ ಅವಸರದ ಜಗತ್ತಿನಲ್ಲಿ ವೆಬ್ ಪತ್ರಿಕೆ ಪಾತ್ರ ತುಂಬಾ ಮುಖ್ಯವಾಗಿದೆ. ತುಂಬಾ ವೇಗವಾಗಿ, ಎಷ್ಟು ಬೇಕೋ ಅಷ್ಟು ಸುದ್ದಿಯನ್ನು ತಲುಪಿಸಲಾಗುತ್ತೆ. ಅಂತಹ ಕೆಲಸ ಮಾಡುತ್ತಿರುವ ನಾಗೇಶ ತಳವಾರ ಸಂಪಾದಕತ್ವದ ಪ್ರಜಾಸ್ತ್ರ ವೆಬ್ ಪತ್ರಿಕೆ ಹೀಗೆ ಯಶಸ್ವಿಯಾಗಲಿ ಎಂದರು.


ಇನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಕಲ್ಮೇಶ ಹಾವೇರಪೇಟ್ ಮಾತನಾಡಿ, ಮಾಧ್ಯಮ ಈ ಸಮಾಜದ ಕನ್ನಡಿಯಾಗಿ ಹೇಗೆ ಕೆಲಸ ಮಾಡುತ್ತಿದೆ. ಮಾಧ್ಯಮದಿಂದ ಅದೆಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ. ಹೀಗಾಗಿ ಪತ್ರಕರ್ತರಿಗೆ ಧನ್ಯವಾದಗಳು ಎಂದರು. ಇನ್ನೋರ್ವ ಮುಖ್ಯ ಅತಿಥಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ ಖಾಜಿ ಮಾತನಾಡಿ, ಸಮಾಜದಲ್ಲಿ ಪತ್ರಿಕೆಗಳ ಪಾತ್ರ ಸಾಕಷ್ಟಿದೆ ಎಂದರು. ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮ ತನ್ನದೆಯಾದ ಜವಾಬ್ದಾರಿಯುತ ಕೆಲಸ ಮಾಡುತ್ತಿದೆ ಎಂದರು.


ಅತಿಥಿಯಾಗಿ ಭಾಗವಹಿಸಿದ್ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಸ್ಪರ್ಧಿ ಮಹೇಶ ಕಟವಟೆ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರಜಾಸ್ತ್ರ ವೆಬ್ ಪತ್ರಿಕೆಯ ಸಂಪಾದಕ ನಾಗೇಶ ತಳವಾರ ಮಾತನಾಡಿದರು.
ಈ ವೇಳೆ ಪ್ರಕಾಶ ಏಳಗುಡ್ಡ, ಮಾಂತೇಶ ಪಟಾಣಿ, ಮುದಕಪ್ಪ ಹಿರೇಮನಿ, ಜಯಪ್ರಕಾಶ ಬದಾಮಿ ಸುರೇಶ ತೋಟಗೇರ, ರಾಜು ಕಾಂಬಳೆ, ರಾಮಚಂದ್ರ ಕಟ್ಟಿಮನಿ, ಲೋಕೇಶ, ರಾಘವೇಂದ್ರ, ರೋಹಿತ, ವೀಣಾ ಕೋಳಿವಾಡ, ನಿರ್ಮಲಾ, ಮುತ್ತು ಸಂಗಳದ, ಶ್ರೀಕಾಂತ, ಮಂಜು ಬೇಲೂರ, ವೀರೇಶ ಅಡಕಿ, ಮೌನೇಶ ದೊಡ್ಡಮನಿ, ಜಯರಾಜ ಹುಣಸಿಮರದ, ಉಮೇಶ ವಾಲೀಕಾರ ಭಾಗವಹಿಸಿದ್ದರು. ಡಾ.ವಿನಯ ನಂದಿಹಾಳ ನಿರೂಪಿಸಿ ಸ್ವಾಗತಿಸಿದರು.


TAG


Leave a Reply

Your email address will not be published. Required fields are marked *

error: Content is protected !!