ಖ್ಯಾತ ವಿಜ್ಞಾನಿ ಸಿ.ಎನ್ ಆರ್ ರಾವ್ ಗೆ ಎನರ್ಜಿ ಫ್ರಾಂಟಿಯರ್ ಪ್ರಶಸ್ತಿ

247

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಬೆಂಗಳೂರು: ಖ್ಯಾತ ವಿಜ್ಞಾನಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಿ.ಎನ್ ಆರ್ ರಾವ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಎನರ್ಜಿ ಫ್ರಾಂಟಿಯರ್ ಪ್ರಶಸ್ತಿ ಲಭಿಸಿದೆ. ಶಕ್ತಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಈ ಪ್ರಶಸ್ತಿ ಬಂದಿದೆ. ಅಕ್ಟೋರ್ 14ರಂದು ರೋಮ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಹೈಡ್ರೋಜನ್ ಸಂಗ್ರಹಣೆ, ಹೈಡ್ರೋಜನ್ ದ್ಯುತಿ ರಾಸಾಯನಿಕ ಹಾಗೂ ಎಲೆಕ್ಟ್ರೋಕೆಮಿಕಲ್ ಉತ್ಪಾದನೆ, ಹೈಡ್ರೋಜನ್ ಸೌರ ಉತ್ಪಾದನೆ, ಲೋಹವಲ್ಲದ ವೇಗವರ್ದನ ಅಂಶಗಳ ಮೇಲೆ ಪ್ರೊ.ಸಿ.ಎನ್ ಆರ್ ರಾವ್ ಅವರು ಕೆಲಸ ಮಾಡ್ತಿದ್ದಾರೆ. ಇವರಿಗೆ ಸಂದ ಈ ಪ್ರಶಸ್ತಿ ಶಕ್ತಿ ಸಂಶೋಧನೆಯಲ್ಲಿ ನೊಬೆಲ್ ಎಂದೇ ಕರೆಯಲಾಗುತ್ತೆ.




Leave a Reply

Your email address will not be published. Required fields are marked *

error: Content is protected !!