ನೀರಿಗಾಗಿ ನಗರಸಭೆ ಮುತ್ತಿಗೆ

319

ಸುರುಪುರ: ನಗರದ ರಂಗಂಪೇಟ ತಿಮ್ಮಾಪುರ ಹಸನಾಪುರ ಸತ್ಯಂಪೆಟ್ ಸೇರಿದಂತೆ ಸುಮಾರು ಹದಿನೈದು ವಾರ್ಡುಗಳಿಗೆ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ.ಇಂದು ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಯ್ತು.

ಸುಮಾರಿಗೆ ನೂರಾರು ಸಂಖ್ಯೆಯಲ್ಲಿ ರನ್ನ ಪೇಟೆಯಿಂದ ಪಾದಯಾತ್ರೆಯ ಮೂಲಕ ನಗರಸಭೆವರೆಗೆ ಬಂದು ನಗರಸಭೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ನಗರಸಭೆಯ ನಾಮಫಲಕಗಳನ್ನ ಕಿತ್ತೆಸೆದು ಕುರ್ಚಿಗಳನ್ನ ಜಖಂಗೊಳಿಸಿ ಆಕ್ರೋಶವನ್ನ ಹೊರ ಹಾಕಿದ್ರು. ಈ ವೇಳೆ ನಗರಸಭೆ ವಿರುದ್ಧ ಘೋಷಣೆಗಳನ್ನ ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ್ರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಸುರೇಶ್ ಅಂಕಲಗಿ, ನಗರಸಭೆ ಆಯುಕ್ತ ಏಜಾಜ್ ಹುಸೇನ್ ಆಗಮಿಸಿ ವಾರಕ್ಕೆ ಎರಡು ಬಾರಿ ಕುಡಿಯುವ ನೀರಿನ್ನು ಒದಗಿಸಲಾಗುವುದು ಅಂತಾ ಭರವಸೆ ನೀಡಿದ್ಮೇಲೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.

ಸುರೇಶ್ ಸಜ್ಜನ್ ಮಲ್ಲಿಕಾರ್ಜುನ್ ಕಡೆಚೂರ್, ಶೇಖ್ ಮಹಿಬೂಬ ಒಂಟಿ, ಭೀಮಶಂಕರ್ ಬಿಲ್ಲವ್ ರಾಜು ಫುಲ್ಸೆ, ವೀರಭದ್ರಪ್ಪ ಕುಂಬಾರ, ಅಂಬರೀಶ್ ಕುಂಬಾರ, ಅಯ್ಯಪ್ಪ ಅಕ್ಕಿ, ಪ್ರಕಾಶ ಅಲಬನೂರು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ರು.


TAG


Leave a Reply

Your email address will not be published. Required fields are marked *

error: Content is protected !!