ಇಂದಿರಾ ಬಂಟ ಪ್ರಣಬ್ ದಾದಾರನ್ನ ರಾಜೀವ ಹೊರ ಹಾಕಿದ್ದೇಕೆ?

390

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರು ಕಾಂಗ್ರೆಸ್ ಕಟ್ಟಾಳು. ಕಾಳಿದೇವಿ ಉಪಾಸಕರಾಗಿದ್ದ ಪ್ರಣಬ್ ರಾಜಕೀಯ ಬದುಕಿನಲ್ಲಿ ಸಾಕಷ್ಟು ವೈವಿಧ್ಯಮಯ ಜೀವನ ನೋಡಿದ್ರು. 1969ರಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ವಿಕೆ ಕೃಷ್ಣನ್ ಮೆನನ್ ಪರ ಪ್ರಚಾರ ಮಾಡಿ ಗೆಲುವಿಗೆ ಕಾರಣರಾಗಿದ್ರು. ಪ್ರಣಬ್ ಸಂಘಟನಾ ಕೌಶಲ್ಯ, ಸಾಮರ್ಥ್ಯ ಅರಿತ ಅಂದಿನ ಪ್ರಧಾನಿ ಇಂದಿರಾ ಗಾಂಧಿ 34 ವರ್ಷದ ಬಂಗಾಳಿ ಹುಡ್ಗನನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತಂದರು.

ಮುಂದೆ ರಾಜ್ಯಸಭೆಗೆ ಅವರನ್ನ ಆಯ್ಕೆ ಮಾಡಲಾಯ್ತು. ಇಂದಿರಾ ಗಾಂಧಿಗೆ ಆಪ್ತರಾದ್ರು. 1973ರಲ್ಲಿ ಕೈಗಾರಿಕೆ ಅಭಿವೃದ್ಧಿಯ ಉಪಮಂತ್ರಿಯಾದ್ರು. ರಕ್ಷಣೆ, ಹಣಕಾಸು, ಆದಾಯ, ನೌಕಾ, ಸಾರಿಗೆ ಸಂಪರ್ಕ ವ್ಯವಸ್ಥೆ, ಬಾಹ್ಯ ಇಲಾಖೆ, ವಾಣಿಜ್ಯ ಹಾಗೂ ಉದ್ಯಮ ಸಚಿವರಾಗಿ ಹೀಗೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ರು.

ಇಂದಿರಾ ಗಾಂಧಿಯವರ ಪಡೆಯಲ್ಲಿ ಗುರುತಿಸಿಕೊಂಡಿದ್ದ ಪ್ರಣಬ್ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗ್ತಿತ್ತು. ಹೀಗಾಗಿ 1983ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಪ್ರಧಾನಿ ಹುದ್ದೆಗೆ ಪ್ರಣಬ್ ಮುಖರ್ಜಿ ಏರಲಿದ್ದಾರೆ ಎನ್ನಲಾಗ್ತಿತ್ತು. ಆದ್ರೆ, ಇಂದಿರಾ ಪುತ್ರ ರಾಜೀವ ಗಾಂಧಿ ಪ್ರಧಾನಿಯಾದ್ರು. ಆಗ ಅವರ ರಾಜಕೀಯ ಜೀವನ ಮಸುಕಾಗಲು ಶುರುವಾಯ್ತು. ಪಿಎಂ ರಾಜೀವ ಗಾಂಧಿ ಹೇಳದೆ ಕೇಳದೆ 1984ರಲ್ಲಿ ಪ್ರಣಬ್ ಅವರನ್ನ ಸಚಿವ ಸ್ಥಾನದಿಂದ ತೆಗೆದು ಹಾಕಿದ್ರು. ಅಲ್ದೇ 1986ರಲ್ಲಿ ಸಿಡಬ್ಲುಸಿ (ಕಾಂಗ್ರೆಸ್ ವರ್ಕಿಂಗ್ ಕಮಿಟಿ) ಯಿಂದಲೂ ಗೇಟ್ ಪಾಸ್ ಕೊಟ್ಟರು.

ಹೀಗೆ ದಿನಗಳು ಕಳೆದಂತೆ ಕಾಂಗ್ರೆಸ್ ಪಕ್ಷದಲ್ಲಿ ಮುಖರ್ಜಿಯನ್ನ ಸೈಡ್ ಲೈನ್ ಮಾಡಲಾಯ್ತು. ಸೋನಿಯಾ ಗಾಂಧಿ ಅದಾಗ್ಲೇ ರಾಜಕೀಯದಲ್ಲಿ ಗುರುತಿಸಿಕೊಂಡಿದ್ರು. ಇದೆಲ್ಲ ಅವಮಾನಗಳಿಂದ ಬೇಸತ ಕಾಂಗ್ರೆಸ್ ನಿಷ್ಟಾವಂತ ನಾಯಕ ಹೊರ ನಡೆದ್ರು. ತವರು ನೆಲ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ರು. ಮುಂದೆ 3 ವರ್ಷಗಳ ಬಳಿಕ ರಾಜೀವ ಗಾಂಧಿ ಹಾಗೂ ಮುಖರ್ಜಿ ನಡುವೆ ರಾಜಿ ಸಂಧಾನವಾಗಿ ಎನ್ಎಸ್ ಸಿ ಪಕ್ಷ ಕಾಂಗ್ರೆಸ್ ನೊಂದಿಗೆ ವಿಲೀನವಾಯ್ತು.

ಮೇ 21, 1991ರಲ್ಲಿ ಚೆನ್ನೈ ಶ್ರೀಪೆರಂಬುದ್ದೂರ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಆತ್ಮಹುತಿ ಬಾಂಬ್ ದಾಳಿಗೆ ರಾಜೀವ ಗಾಂಧಿ ಬಲಿಯಾದ್ರು. ರಾಜೀವ ಅಕಾಲಿಕ ನಿಧನದ ಬಳಿಕವೂ ಪ್ರಣಬ್ ಪ್ರಧಾನಿಯಾಗ್ಲಿಲ್ಲ. ಪಿ.ವಿ ನರಸಿಂಹರಾವ್ ಅವರು ಪಿಎಂ ಆದ್ರು. ಇವರು ಮುಖರ್ಜಿಯನ್ನ ಯೋಜನಾ ಆಯೋಗದ ಉಪಾಧ್ಯಕ್ಷ ಮಾಡಿದ್ರು. 1995-96ರಲ್ಲಿ ವಿದೇಶಾಂಗ ಸಚಿವರಾದ್ರು. ಮುಂದೆ ಯುಪಿಎ 2ನೇ ಅವಧಿಯಲ್ಲಿ ಮನಮೋಹನ ಸಿಂಗ್ ಪಿಎಂ ಆದಾಗ್ಲೂ ಪ್ರಣಬ್ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ರು. ಕೊನೆಗೆ 2012ರಲ್ಲಿ ರಾಷ್ಟ್ರಪತಿಯಾದ್ರು.

ಹೀಗೆ ಐದು ದಶಕಗಳ ಕಾಲ ರಾಜಕೀಯ ಬದುಕಿನಲ್ಲಿ ಹಲವು ಹುದ್ದೆಗಳನ್ನ ನಿಭಾಯಿಸಿದ ಪ್ರಣಬ್ ಮುಖರ್ಜಿ ಅವರು, ನಾನು ಎಂದಿಗೂ 7 ಆರ್ ಸಿಆರ್ ರೋಡ್(ಪ್ರಧಾನಿ ಮಂತ್ರಿ ಅಧಿಕೃತ ನಿವಾಸ ಇರುವುದು) ಬಗ್ಗೆ ಕನಸು ಕಂಡಿಲ್ಲ ಎಂದು ಹೇಳಿದ್ರು. ಕಾಂಗ್ರೆಸ್ ಕಷ್ಟದಲ್ಲಿ ಇದ್ದಾಗಲೆಲ್ಲ ನೆರವಿಗೆ ಬಂದಿದ್ದ ಮುಖರ್ಜಿ ಪ್ರಧಾನಿ ಹುದ್ದೆಗೆ ಅರ್ಹ ವ್ಯಕ್ತಿಯಾಗಿದ್ರು ಅನ್ನೋದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!