ಸಖತ್ ಸೌಂಡ್ ಮಾಡುತ್ತಿದೆ ‘ರತ್ನನ್ ಪ್ರಪಂಚ’ ಟ್ರೇಲರ್

232

ಪ್ರಜಾಸ್ತ್ರ ಸಿನಿಮಾ

ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್ ನಲ್ಲಿಯೂ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್ ನಟನಯೆ ರತ್ನನ್ ಪ್ರಪಂಚ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ಕೆಆರ್ ಜಿ ಸ್ಟುಡಿಯೋ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನ ಅರ್ಪಿಸುತ್ತಿದ್ದಾರೆ. ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಸಹ ಅವರದ್ದೆಯಾಗಿದೆ.

ಧನಂಜಯಗೆ ಜೋಡಿಯಾಗಿ ರೇಬಾ ಜಾನ್ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ, ಶ್ರುತಿ, ಅನು ಪ್ರಭಾಕರ್, ಅಚ್ಚುತ್ ಕುಮಾರ್, ರವಿಶಂಕರ್ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ. ಇದೀಗ ರಿಲೀಸ್ ಆಗಿರುವ ಟ್ರೇಲರ್ ನೋಡಗರಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!