ಆರ್ ಸಿಬಿ ಹ್ಯಾಟ್ರಿಕ್ ಗೆಲುವು

258

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 38 ರನ್ ಗಳಿಂದ ಭರ್ಜರಿಯಾಗಿ ಗೆಲುವು ದಾಖಲಿಸಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿ ಕುಳಿತಿದೆ. ಟಾಸ್ ಗೆದ್ದು ಮೊದ್ಲು ಬ್ಯಾಟ್ ಮಾಡಿದ ಕೊಹ್ಲಿ ಪಡೆ, ಗ್ಲೇನ್ ಮ್ಯಾಕ್ಸ್ ವೆಲ್(78) ಹಾಗೂ ಎಬಿಡಿ(76 ನಾಟೌಟ್) ಆಟದಿಂದಾಗಿ 204 ರನ್ ಬಾರಿಸಿದ್ರು.

205 ರನ್ ಗಳ ಬಿಗ್ ಸ್ಕೋರ್ ಚೇಸ್ ಮಾಡಿದ ಇಯಾನ್ ಮಾರ್ಗನ್ ಟೀಂ, 166 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ರಾಣಾ 18, ಗಿಲ್ 21, ತ್ರಿಪಾಟಿ 25, ಮಾರ್ಗನ್ 29, ದಿನೇಶ ಕಾರ್ತಿಕ 2, ಶಕೀಬ್ ಹಸನ್ 26, ರಸಲ್ 31, ಕಮಿನ್ಸ್ 6, ಹರ್ಬಜನ್ ಸಿಂಗ್ 2 ಹಾಗೂ ವರುಣ ಚಕ್ರವರ್ತಿ 2 ರನ್ ಗಳಿಸಿದರು.

ಆರ್ ಸಿಬಿ ಪರ ಜೈಮಸನ್ 3, ಚಾಹಲ್ 2, ಹರ್ಷಲ ಪಟೇಲ್ 2 ಹಾಗೂ ವಾಷಿಂಗ್ಟನ್ ಸುಂದರ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!