ಖ್ಯಾತ ಕುಸ್ತಿ ಪಟು ಸಹೋದರಿಯರಾದ ಪೊಗೆಟ್ ಸಹೋದರಿ ಆತ್ಮಹತ್ಯೆ!

270

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಭಾರತದ ಖ್ಯಾತ ಕುಸ್ತಿಪುಟ ಸಹೋದರಿಯರಾದ ಗೀತಾ ಹಾಗೂ ಬಬಿತಾ ಪೊಗೆಟ್ ಸಹೋದರಿ ಸಂಬಂಧಿಯಾದ ರಿತಿಕಾ ಪೊಗೆಟ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಕುಸ್ತಿ ಆಟದ ಫೈನಲ್ ಪಂದ್ಯದಲ್ಲಿ ಸೋತಿದ್ದಕ್ಕೆ ಮನನೊಂದು ರಿತಿಕಾ ಪೊಗೆಟ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗ್ತಿದೆ.

ರಾಜಸ್ಥಾನದ ಭಾರತಪುರದಲ್ಲಿ ರಾಜ್ಯ ಮಟ್ಟದ ಸಬ್ ಜ್ಯೂನಿಯರ್, ಜ್ಯೂನಿಯರ್ ಮಹಿಳಾ ಹಾಗೂ ಪುರುಷರ ಕುಸ್ತಿ ಪಂದ್ಯಾವಳಿ ನಡೆದಿದೆ. ಈ ಟೂರ್ನಿಯ ಫೈನಲ್ ಪಂದ್ಯ ಮಾರ್ಚ್ 12 ಹಾಗೂ 14ರಂದು ನಡೆದಿದೆ. ಮಾರ್ಚ್ 14ರಂದು ನಡೆದ ಫೈನಲ್ ಪಂದ್ಯದಲ್ಲಿ ರಿತಿಕಾ ಪೊಗೆಟ್ ಕೇವಲ 1 ಅಂಕದಿಂದ ಸೋಲು ಅನುಭವಿಸಿದ್ದಾರೆ. ಈ ಪಂದ್ಯದ ವೇಳೆ ಪೊಗೆಟ್ ಸಹೋದರಿಯರ ತಂದೆಯಾದ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ್ ಪೊಗೆಟ್ ಸಹ ಹಾಜರಿದ್ದರು.

ಗೀತಾ ಹಾಗೂ ಬಬಿತಾ ಸಹೋದರಿಯರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಟೂರ್ನಿಯಲ್ಲಿ ಗೀತಾ ಭಾರತದ ಮೊದಲ ಮಹಿಳಾ ಆಟಗಾರ್ತಿಯಾಗಿ ಗೀತಾ ಅಖಾಡಕ್ಕೆ ಇಳಿದ ಚಿನ್ನ ಗೆದ್ದಿದ್ದಾರೆ. 2012ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. ಬಬಿತಾ ಪೊಗೆಟ್ ಸಹ ಬೆಳ್ಳಿ ಪದಕ ಗೆದ್ದಿದ್ದಾರೆ. ಇವರ ಜೀನದ ಬಗ್ಗೆ ಬಾಲಿವುಡ್ ನಲ್ಲಿ ದಂಗಲ್ ಅನ್ನೋ ಮೂವಿ ಬಂದು ಬ್ಲಾಕ್ ಬ್ಲಸ್ಟರ್ ಸಕ್ಸಸ್ ಆಗಿದೆ.




Leave a Reply

Your email address will not be published. Required fields are marked *

error: Content is protected !!