ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಫೈರಿಂಗ್

294

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಗಂಡಿನ ಸದ್ದು ಕೇಳಿಸಿದೆ. ಜನರಿಗೆ ಹೆದರಿಸಿ ದರೋಡೆ ಮಾಡ್ತಿದ್ದ ಆಸಾಮಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಅನುಬನ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ನಂದಿನಿ ಲೇಔಟ್ ಪೊಲೀಸರು, ಲಗ್ಗೇರಿಯ ಕೂಲಿನಗರ ಸೇತುವೆ ಬಳಿ ಅರೆಸ್ಟ್ ಮಾಡಲಾಗಿದೆ. ಅನುಬನ್ ಬಂಧಿಸಲು ಹೋದಾಗ ಡ್ರ್ಯಾಗನ್ ನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಲಾಗಿದೆ.

ನವೆಂಬರ್ 26ರಂದು ರಿಂಗ್ ರೋಡ್ ಬಳಿ ಲಾರಿ ಚಾಲಕನಿಗೆ ಹೆದರಿಸಿ ದರೋಡೆ ಮಾಡಲಾಗಿತ್ತು. ಈ ಸಂಬಂಧ ಲಾರಿ ಚಾಲಕ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇದರ ತನಿಖೆ ನಡೆಸಿದ ಪೊಲೀಸರು ಮಂಗಳವಾರ ಬೆಳಗ್ಗೆ ಅನುಬನ್ ಎಂಬಾತನನ್ನ ಅರೆಸ್ಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!